August 10, 2026
Monday, August 10, 2026
spot_img

ರೈತರ ಜೀವನಕ್ಕೆ ಬಣ್ಣ ತುಂಬಿದ ವ್ಯಾಲೆಂಟೈನ್ಸ್‌ ಡೇ, ಕೆಂಪು ಗುಲಾಬಿಗೆ ಭಾರೀ ಡಿಮ್ಯಾಂಡ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದಲ್ಲಿ ಕೆಲವರು ಪ್ರೇಮಿಗಳ ದಿನ ಆಚರಣೆ ಮಾಡುತ್ತಾರೆ. ಈ ದಿನದಂದು ಒಬ್ಬರಿಗೊಬ್ಬರು ಕೆಂಪು ಗುಲಾಬಿಗಳನ್ನು ನೀಡುತ್ತಾರೆ. ವ್ಯಾಲೆಂಟೈನ್ಸ್‌ ದಿನದ ಕೆಂಪು ರಂಗು ರೈತರ ಜೀವನಕ್ಕೂ ಬಣ್ಣ ತುಂಬಿದೆ. ಕೆಂಪು ಗುಲಾಬಿಗೆ ಡಿಮ್ಯಾಂಡ್‌ ಹೆಚ್ಚಾಗಿದ್ದು, ರೈತರು ಖುಷಿಯಲ್ಲಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಭಾರೀ ಪ್ರಮಾಣದ ಕೆಂಪು ಗುಲಾಬಿ ಬೆಳೆಯಲಾಗಿದೆ. ಒಂದು ಕೆಂಪು ಗುಲಾಬಿಗೆ ಇಪ್ಪತ್ತು ರೂಪಾಯಿವರೆಗೂ ಹಣ ನೀಡಲಾಗುತ್ತಿದೆ.

ದೇಶದಲ್ಲಿ ಮಾತ್ರವಲ್ಲದೆ ವಿದೇಶಕ್ಕೂ ಈ ಗುಲಾಬಿಗಳು ಪ್ರಯಾಣಿಸಲಿದ್ದು, ರೈತರಿಗಂತೂ ಲಾಭವೋ ಲಾಭ! ಬರೀ ಕೆಂಪು ಗುಲಾಬಿ ಮಾತ್ರವಲ್ಲದೆ ಕಲರ್‌ ಕಲರ್‌ ಗುಲಾಬಿಗಳನ್ನು ಬೆಳೆದ ರೈತರು ಕೂಡ ಸಂತಸದಲ್ಲಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !