July 9, 2026
Thursday, July 9, 2026
spot_img

ಟಿ20 ವಿಶ್ವಕಪ್‌ | ಭಾರತ ವಿರುದ್ಧ ಟಾಸ್ ಗೆದ್ದ ನಮೀಬಿಯಾ ಬೌಲಿಂಗ್: ಸಂಜು ಸ್ಯಾಮ್ಸನ್ ಗೆ ಸಿಕ್ತು ಚಾನ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಿ20 ವಿಶ್ವಕಪ್‌ನಲ್ಲಿ ಭಾರತ ಮತ್ತು ನಮೀಬಿಯಾ ಇಂದು ಮುಖಾಮುಖಿಯಾಗಿವೆ.ಟಾಸ್ ಗೆದ್ದ ನಮೀಬಿಯಾ ನಾಯಕ ಬೌಲಿಂಗ್ ಆಯ್ದುಕೊಂಡಿದ್ದಾರೆ. ಹೀಗಾಗಿ ಭಾರತ ಮೊದಲು ಬ್ಯಾಟಿಂಗ್ ಮಾಡುತ್ತಿದೆ.

ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟೀಂ ಇಂಡಿಯಾ ಸತತ ಎರಡನೇ ಗೆಲುವನ್ನು ಗುರಿಯಾಗಿರಿಸಿಕೊಂಡರೆ ನಮೀಬಿಯಾ ತನ್ನ ಮೊದಲ ಪಂದ್ಯದಲ್ಲಿ ಸೋತ ನಂತರ ತನ್ನ ಖಾತೆಯನ್ನು ತೆರೆಯಲು ನೋಡುತ್ತಿದೆ.

ಟೀಂ ಇಂಡಿಯಾದಲ್ಲಿ ಎರಡು ಬದಲಾವಣೆಗಳನ್ನು ಮಾಡಲಾಗಿದ್ದು, ಅನಾರೋಗ್ಯದಿಂದ ಬಳಲುತ್ತಿರುವ ಅಭಿಷೇಕ್ ಶರ್ಮಾ ಇನ್ನು ಗುಣಮುಖರಾಗಿಲ್ಲ ಆದ್ದರಿಂದ ಅವರ ಸ್ಥಾನದಲ್ಲಿ ಸಂಜು ಸ್ಯಾಮ್ಸನ್ ಅವರನ್ನು ಆಯ್ಕೆ ಮಾಡಲಾಗಿದೆ. ಹಾಗೆಯೇ ಮೊಹಮ್ಮದ್ ಸಿರಾಜ್ ಬದಲಿಗೆ ಜಸ್ಪ್ರೀತ್ ಬುಮ್ರಾ ತಂಡಕ್ಕೆ ಮರಳಿದ್ದಾರೆ ಎಂದು ಸೂರ್ಯಕುಮಾರ್ ಮಾಹಿತಿ ನೀಡಿದರು.

ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಸಂಜು ಸ್ಯಾಮ್ಸನ್, ಇಶಾನ್ ಕಿಶನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ಅಕ್ಸರ್ ಪಟೇಲ್, ವರುಣ್ ಚಕ್ರವರ್ತಿ, ಅರ್ಷದೀಪ್ ಸಿಂಗ್ ಮತ್ತು ಜಸ್ಪ್ರೀತ್ ಬುಮ್ರಾ.

ನಮೀಬಿಯಾ ತಂಡ: ಗೆರ್ಹಾರ್ಡ್ ಎರಾಸ್ಮಸ್ (ನಾಯಕ), ಲಾರೆಂಟ್ ಸ್ಟೀನ್‌ಲ್ಯಾಂಪ್, ಜಾನ್ ಫ್ರಿಲಿಂಕ್, ಜಾನ್ ನಿಕೋಲ್ ಲಾಫ್ಟಿ-ಈಥನ್, ಜೆಜೆ ಸ್ಮಿಟ್, ಜೇನ್ ಗ್ರೀನ್ (ವಿಕೆಟ್ ಕೀಪರ್), ರೂಬೆನ್ ಟ್ರಂಪೆಲ್‌ಮನ್, ಮಲನ್ ಕ್ರುಗರ್, ಬರ್ನಾರ್ಡ್ ಸ್ಕೋಲ್ಟ್ಜ್, ಬೆನ್ ಶಿಕೊಂಗೊ ಮತ್ತು ಮ್ಯಾಕ್ಸ್ ಹಿಂಗೋ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !