February 12, 2026
Thursday, February 12, 2026
spot_img

ಆಳಂದ ಪಟ್ಟಣದ ಲಾಡ್ಲೆ ಮಶಾಕ್ ದರ್ಗಾದ ಶಿವಲಿಂಗ ಪೂಜೆಗೆ ಅನುಮತಿ ಕೋರಿ ಡೀಸಿಗೆ ಮನವಿ

ಹೊಸದಿಗಂತ ವರದಿ, ಕಲಬುರಗಿ:

ಜಿಲ್ಲೆಯ ಆಳಂದ ಪಟ್ಟಣದ ಹಜರತ್ ಲಾಡ್ಲೆ ಮಶಾಕ್ ದರ್ಗಾದಲ್ಲಿನ ಶ್ರೀ ರಾಘವ ಚೈತನ್ಯರ ಸಮಾಧಿಯ ಮೇಲಿನ ಶಿವಲಿಂಗಕ್ಕೆ ಫೆ.೧೫ರ ಶಿವರಾತ್ರಿಯಂದು ರುದ್ರಾಭಿಷೇಕ ಹಾಗೂ ಸಹಸ್ರ ಬಿಲ್ವಾರ್ಚನೆಯೊಂದಿಗೆ ಪೂಜೆ ಸಲ್ಲಿಸಲು ಅವಕಾಶ ನೀಡುವಂತೆ ಹಿಂದು ಮುಖಂಡ ಗುರುಶಾಂತ್ ಪ್ರೇಮನಾಥ್ ಟೆಂಗಳಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಪಟ್ಟಣದ ಲಾಡ್ಲೆ ಮಶಾಕ್ ದರ್ಗಾದಲ್ಲಿರುವ ರಾಘವ್ ಚೈತನ್ಯರ ಶಿವಲಿಂಗಕ್ಕೆ ಕಳೆದ ೪೦೦ ವರ್ಷಗಳಿಂದ ಜೋಶಿ ಮನೆತನದವರು ಪೂಜೆ ಸಲ್ಲಿಸುತ್ತಾ ಬಂದಿದ್ದಾರೆ.ಆದರೆ,ಕಳೆದ ಹಲವಾರು ತಿಂಗಳುಗಳಿಂದ ಪೂಜೆ ಮಾಡುವುದನ್ನು ದರ್ಗಾ ಕಮಿಟಿಯವರು ತಡೆಹಿಡಿದಿದ್ದು,ಇದು ನಮ್ಮ ಧಾರ್ಮಿಕ ಭಾವನೆಗಳಿಗೆ ಘಾಸಿಯಾಗಿರುತ್ತದೆ.ಕಳೆದ ವರ್ಷ ೨೦೦೪೯೭/೨೫ರಲ್ಲಿ ೧೫ ಜನರಿಗೆ ಪೂಜೆಗೆ ಅವಕಾಶ ನೀಡಲಾಗಿತ್ತು.ಇದೀಗ ಈ ವರ್ಷವೂ ಪೂಜೆಗೆ ಅನುಮತಿ ನೀಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯ ಅರ್ಜಿದಾರರಿಗೆ ಮಾತ್ರ ಅವಕಾಶ ನೀಡಿದೆ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಈ ಬಾರಿ ಪೂಜೆಗೆ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿ ಪ್ರತಿಯಲ್ಲಿ ನಮ್ಮ ಹೆಸರು ಇಲ್ಲದ ಕಾರಣ ನ್ಯಾಯಾಲಯ ಅನುಮತಿಗೆ ನಿರಾಕರಿಸಿದೆ. ಮೌಖಿಕವಾಗಿ ಮತ್ತೊಮ್ಮೆ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದ್ದಲ್ಲಿ ಪರಿಗಣಿಸಲು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಿದ್ದು,ಕಾರಣ ಫೆ.೧೫ರಂದು ಮಹಾಶಿವರಾತ್ರಿಯ ದಿನದಂದು ರಾಘವ ಚೈತನ್ಯರ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಮಠಾಧೀಶರು ಸೇರಿದಂತೆ ನನ್ನನ್ನು ಸೇರಿಸಿ ಈ ಕೆಳಗಿನ ಮುಖಂಡರಿಗೆ ಪೂಜೆಗೆ ಅವಕಾಶ ನೀಡುವಂತೆ ಜಿಲ್ಲಾಧಿಕಾರಿ, ಜಿಲ್ಲಾ ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಜಿಲ್ಲಾಡಳಿತಕ್ಕೆ ಸಲ್ಲಿಸಿದ ಹೆಸರು:
ಹರ್ಷಾನಂದ ಸುಭಾಷ್ ಗುತ್ತೇದಾರ್ , ರಾಕೇಶ್ ರಾಜಶೇಖರ ಜಮಾದಾರ್ , ಶಿವರಾಜ ಷಡಕ್ಷರಿ ಬಾಳಿ, ಅಶೋಕ್ ಶಾಂತಪ್ಪ ಬಗಲಿ ,ಮಲ್ಲಿಕಾರ್ಜುನ ಶಿವಲಿಂಗಪ್ಪ ಸಾವಳಗಿ , ಶಿವಪುತ್ರ ನಡಿಗೇರಿ , ಮಲ್ಲಿಕಾರ್ಜುನ ಕಂದಗೋಳ, ವೀರಣ್ಣ ಭೀಮಪ್ಪ ಹತ್ತರಗಿ , ರಾಜು ಚೌಹಾಣ್ , ಹಣಮಂತರಾವ್ ಪಾಟೀಲ್ ,ರವಿ ಮೌಲಪ್ಪ ಮದನಕರ್ , ಷ.ಬ್ರ.ವೀರಭದ್ರ ಶಿವಾಚಾರ್ಯರು ಕಡಗಂಚಿ , ಮಲಕಣ್ಣಾ ಹಿರೇಪುಜಾರಿ , ಗುರುಶಾಂತ್ ಟೆಂಗಳಿ ಸೇರಿದಂತೆ ಒಟ್ಟು ೧೪ ಜನರಿಗೆ ಶಿವಲಿಂಗ ಪೂಜೆಗೆ ಅವಕಾಶ ಕೋರಿ ಮನವಿ ಸಲ್ಲಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !