July 5, 2026
Sunday, July 5, 2026
spot_img

ಎಸ್‌ಐಆರ್ ದುರುಪಯೋಗ ಕಾಂಗ್ರೆಸ್ ದುರಾಡಳಿತಕ್ಕೆ ಕಾರಣ: ಗೋವಿಂದ ಕಾರಜೋಳ ವಾಗ್ದಾಳಿ

ಹೊಸದಿಗಂತ ವರದಿ ಚಿತ್ರದುರ್ಗ:

ದುರಾಡಳಿತವೇ ಕಾಂಗ್ರೆಸ್ ಸರ್ಕಾರದ ನೀತಿಯಾಗಿದೆ. ಎಸ್‌ಐಆರ್ ಪ್ರಕ್ರಿಯೆಗೆ ಹೆದರಿರುವ ಕಾಂಗ್ರೆಸ್‌ನವರು ಮಸೀದಿ, ಮದರಸಾ, ಕಲ್ಯಾಣ ಮಂಟಪಗಳಲ್ಲಿ ಎಸ್‌ಐಆರ್ ಮಾಡಿಸುತ್ತಿದ್ದಾರೆ. ಇದು ಕಾಂಗ್ರೆಸ್ ದುರಾಡಳಿತಕ್ಕೆ ಸಾಕ್ಷಿ ಎಂದು ಸಂಸದ ಗೋವಿಂದ ಕಾರಜೋಳ ಕಿಡಿ ಕಾರಿದ್ದಾರೆ.

ಚಿತ್ರದುರ್ಗದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಎಲ್‌ಓಗಳು ಕೆಲವೆಡೆ ಫಾರಂ ಕೊಟ್ಟು ನೀವೇ ಫಾರಂ ತುಂಬಿಕೊಡಿ ಎಂದು ಹೇಳಿ ಹೋಗುತ್ತಿದ್ದಾರೆ. ಅನಕ್ಷರಸ್ಥರಿಗೆ ಫಾರಂ ತುಂಬಿಕೊಡಲು ಬರುವುದಿಲ್ಲ. ಈ ಬಗ್ಗೆ ರಾಜ್ಯ ಮುಖ್ಯ ಚುನಾವಣಾ ಆಯುಕ್ತರಿಗೆ ತಿಳಿಸಿದ್ದೇನೆ. ಗೊಲ್ಲರಹಟ್ಟಿ, ಆಡಿಗಳಲ್ಲಿ ಅನಕ್ಷರಸ್ಥರಿರುತ್ತಾರೆ ಎಂದು ತಿಳಿಸಿದ್ದೇನೆ. ಅಧಿಕಾರಿಗಳೇ ಮಾಹಿತಿ ಪಡೆದು ಫಾರಂ ತುಂಬುವ ವ್ಯವಸ್ಥೆ ಆಗಬೇಕು ಎಂದು ಹೇಳಿದರು.

ಇದನ್ನೂ ಓದಿ:

ಎಸ್‌ಐಆರ್ ಬೇಡ ಎಂದು ರಾಹುಲ್ ಗಾಂಧಿ ರ‍್ಯಾಲಿ ಮಾಡುತ್ತಿದ್ದಾರೆ. ಜನ ಕಾಂಗ್ರೆಸ್ ತಿರಸ್ಕರಿಸಿ ಬಿಜೆಪಿಗೆ ಮತ ನೀಡಿದ್ದಾರೆ. ಈ ಮೊದಲು ಇವಿಎಂ ಯಂತ್ರ ಸರಿಯಿಲ್ಲ ಎಂದಿದ್ದರು. ನಾವು ಮತ್ತೆ ಹೆಬ್ಬೆಟ್ಟು ಸಂಸ್ಕೃತಿಗೆ ಹೋಗಬೇಕಾಗುತ್ತದೆ. ಇವಿಎಂ ಯಂತ್ರಗಳಲ್ಲಿ ಬೇನಾಮಿ ಮತದಾನಕ್ಕೆ ಅವಕಾಶ ಕಡಿಮೆ. ಇವಿಎಂ ಬೇಡ ಎಂದು ರಾಹುಲ್ ರ‍್ಯಾಲಿ ಮಾಡಿದ್ದರು. ರಾಹುಲ್ ಆಫ್ ಚಡ್ಡಿ ಹಾಕಿಕೊಂಡು ಓಡಾಡಿದ್ದರು. ಎಸ್‌ಐಆರ್ ಈಗಾಗಲೇ ಕೆಲ ರಾಜ್ಯಗಳಲ್ಲಿ ಯಶಸ್ವಿಯಾಗಿದೆ. ಅನರ್ಹರು, ಮೃತರು, ದ್ವಿಕ್ಷೇತದಲ್ಲಿ ಮತ ಹೊಂದಿದವರನ್ನು ತೆಗೆಯಲಾಗಿದೆ. ರೋಣ ಮತಕ್ಷೇತ್ರದಲ್ಲಿ ಓರ್ವ ೧೭ ಕಡೆ ಮತದಾರನಿದ್ಧಾನೆ ಎಂದರು.

ಮಸೀದಿ, ಮಂದಿರ, ಮದರಸಾಗಳಲ್ಲಿ ಎಸ್‌ಐಆರ್ ಪ್ರಕ್ರಿಯೆ ಕೈಬಿಡಲು ಹೆಚ್‌ಡಿಕೆ ಹೇಳಿದ್ದಾರೆ. ಬಾಂಗ್ಲಾ, ಪಾಕ್ ನುಸುಳುಕೋರರಿಗೆ ಕಾಂಗ್ರೆಸ್ ಸರ್ಕಾರವಿದ್ದ ರಾಜ್ಯಗಳು ತವರುಮನೆ ಆದಂತಾಗಿವೆ. ಅದೇ ಕಾರಣಕ್ಕೆ ಕಾಂಗ್ರೆಸ್‌ನಿಂದ ಎಸ್‌ಐಆರ್‌ಗೆ ವಿರೋಧ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಬರಗಾಲ ಆವರಿಸಿದ್ದು, ಗೋಶಾಲೆಗಳನ್ನು ತೆರೆಯಬೇಕು. ಬೆಳೆ ಪರಿಹಾರ ನೀಡಬೇಕು. ಸರ್ಕಾರವೇ ಬೆಳೆವಿಮೆ ಕಟ್ಟಬೇಕು. ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಜಿಲ್ಲೆಗೆ ೨೫ ಕೋಟಿ ನೀಡಬೇಕು. ಹೋಬಳಿಗೆ ಒಂದು ಗೋಶಾಲೆ ತೆರೆಯಬೇಕು ಎಂದು ಸರ್ಕಾರ ಆಗ್ರಹಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !