April 10, 2026
Friday, April 10, 2026
spot_img

ಬಂಗಾರ ಖರೀದಿ ಮಾಡೋರಿಗೆ ಸ್ವಲ್ಪ ನೆಮ್ಮದಿ ಸಿಕ್ತಿದೆ: ಚಿನ್ನ, ಬೆಳ್ಳಿ ದರದಲ್ಲಿ ಇವತ್ತು ಕೂಡ ಇಳಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಿನ್ನ ಹಾಗೂ ಬೆಳ್ಳಿ ಬೆಲೆಗಳು ಇಂದು ಮತ್ತೆ ಕುಸಿತ ಕಂಡಿದ್ದು, ಖರೀದಿದಾರರಿಗೆ ಸ್ವಲ್ಪ ಮಟ್ಟಿನ ರಿಲೀಫ್ ಸಿಕ್ಕಿದೆ. ಶುಕ್ರವಾರದ ವಹಿವಾಟಿನಲ್ಲಿ ಚಿನ್ನದ ದರ ಗ್ರಾಮ್‌ಗೆ ಸುಮಾರು 250ರಿಂದ 280 ರೂಪಾಯಿ ಇಳಿಕೆಯಾಗಿದ್ದು, ಬೆಳ್ಳಿ ಬೆಲೆಯಲ್ಲೂ 10ರಿಂದ 20 ರೂಪಾಯಿ ತನಕ ಕಡಿತವಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಕುಸಿತದ ಪರಿಣಾಮ ದೇಶೀಯ ದರಗಳ ಮೇಲೂ ಬಿದ್ದಿದೆ ಎಂದು ವ್ಯಾಪಾರ ವಲಯ ಹೇಳುತ್ತಿದೆ.

ಪ್ರಸ್ತುತ ಭಾರತದಲ್ಲಿ 24 ಕ್ಯಾರಟ್ ಚಿನ್ನದ 1 ಗ್ರಾಂ ದರ ಸುಮಾರು 15,578 ರೂಪಾಯಿ ಇದ್ದು, 22 ಕ್ಯಾರಟ್ ಚಿನ್ನ 14,280 ರೂಪಾಯಿಗೆ ವಹಿವಾಟಾಗುತ್ತಿದೆ. 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಸುಮಾರು 1,42,800 ರೂಪಾಯಿ ದಾಖಲಾಗಿದೆ. ಬೆಳ್ಳಿ ಬೆಲೆ 1 ಗ್ರಾಂಗೆ 280 ರೂಪಾಯಿಯಾಗಿದ್ದು, 100 ಗ್ರಾಂ ಬೆಳ್ಳಿ ಸುಮಾರು 28,000 ರೂಪಾಯಿ ಮಟ್ಟದಲ್ಲಿ ಇದೆ.

ಇದನ್ನೂ ಓದಿ:

ಬೆಂಗಳೂರು ಸೇರಿದಂತೆ ಮುಂಬೈ, ದೆಹಲಿ, ಚೆನ್ನೈ ಮತ್ತು ಕೋಲ್ಕತಾ ನಗರಗಳಲ್ಲಿ ಸಹ ಚಿನ್ನದ ದರಗಳು ಬಹುತೇಕ ಸಮಾನವಾಗಿವೆ. ವಿದೇಶಿ ಮಾರುಕಟ್ಟೆಗಳಲ್ಲೂ ಚಿನ್ನದ ಬೆಲೆಯಲ್ಲಿ ಸಣ್ಣ ಮಟ್ಟಿನ ಇಳಿಕೆ ಕಂಡುಬಂದಿದ್ದು, ಮುಂದಿನ ದಿನಗಳಲ್ಲಿ ದರದ ಚಲನವಲನದ ಮೇಲೆ ಮಾರುಕಟ್ಟೆ ಗಮನಹರಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !