February 13, 2026
Friday, February 13, 2026
spot_img

ಚುನಾವಣೆ ಹೊಸ್ತಿಲಲ್ಲಿ ಮತದಾರರನ್ನು ಸೆಳೆಯಲು ಮುಂದಾದ ಸ್ಟಾಲಿನ್ ಸರ್ಕಾರ: ಮಹಿಳೆಯರ ಖಾತೆಗೆ ಬಿತ್ತು ಐದು ಸಾವಿರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡು ವಿಧಾನ ಸಭೆ ಚುನಾವಣೆಗೆ ಸಜ್ಜಾಗುತ್ತಿದ್ದು, ಈ ನಡುವೆ ಡಿಎಂಕೆ ಸರ್ಕಾರ ಮಹಿಳೆಯರ ಖಾತೆಗೆ 5 ಸಾವಿರ ರೂ. ಹಣವನ್ನು ಜಮೆ ಮಾಡಿದೆ.

ಕಲೈಗ್ನಾರ್ ಮಗಲಿರ್ ಉರಿಮೈ ತೊಗೈ ಯೋಜನೆಯಡಿ 1.31 ಕೋಟಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ತಲಾ 5 ಸಾವಿರ ರೂ. ಜಮೆಯಾಗಿದೆ. ಫೆಬ್ರವರಿ, ಮಾರ್ಚ್ ಮತ್ತು ಏಪ್ರಿಲ್ ತಿಂಗಳ ಹಣದ ಜೊತೆ ಬೇಸಿಗೆ ಸಮಯದಲ್ಲಿ ನೆರವಾಗಲು 2 ಸಾವಿರ ರೂ. ಹಣವನ್ನು ಹಾಕಲಾಗಿದೆ. ಈ ಮೂಲಕ ಜನರನ್ನು ಸೆಳೆಯಲು ಪ್ರಯತ್ನಿಸುತ್ತಿದೆ.

ಕಲೈಗ್ನರ್ ಮಗಲಿರ್ ಉರಿಮೈ ತೊಗೈ ಯೋಜನೆಯನ್ನು ಸೆಪ್ಟೆಂಬರ್ 2023 ರಲ್ಲಿ ಪ್ರಾರಂಭಿಸಲಾಗಿತ್ತು. ಆರಂಭದಲ್ಲಿ 1.13 ಕೋಟಿ ಮಹಿಳೆಯರಿಗೆ 1 ಸಾವಿರ ರೂ. ನೀಡಲಾಗಿತ್ತು. ಈಗ ರಾಜ್ಯಾದ್ಯಂತ 1.31 ಕೋಟಿ ಮಹಿಳೆಯರಿಗೆ ಈ ಯೋಜನೆಯನ್ನು ವಿಸ್ತರಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !