April 10, 2026
Friday, April 10, 2026
spot_img

ಸೇವೆಯಲ್ಲಿರುವ ನ್ಯಾಯಾಧೀಶರ ವಿರುದ್ಧ ಎಷ್ಟು ಕೇಸ್ ಗಳಿವೆ? ಲೋಕಸಭೆಯಲ್ಲಿ ಕೇಂದ್ರ ಸರಕಾರ ನೀಡಿತು ಮಾಹಿತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

2016 ರಿಂದ 2025 ರವರೆಗೆ ಸೇವೆಯಲ್ಲಿರುವ ನ್ಯಾಯಾಧೀಶರ ವಿರುದ್ಧ ಒಟ್ಟು 8,630 ದೂರುಗಳು ದಾಖಲಾಗಿವೆ ಎಂದು ಕೇಂದ್ರ ಕಾನೂನು ಸಚಿವಾಲಯ ಲೋಕಸಭೆಯಲ್ಲಿ ತಿಳಿಸಿದೆ.

ಡಿಎಂಕೆ ಪಕ್ಷದ ಸಂಸದ ಮಥೇಸ್ವರನ್ ವಿಎಸ್ ಅವರು ಕೇಳಿದ ಪ್ರಶ್ನೆಗೆ ಉತ್ತರ ನೀಡಿರುವ ಕಾನೂನು ಮತ್ತು ನ್ಯಾಯ ಸಚಿವಾಲಯದ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು, ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ಕಚೇರಿಯಿಂದ ಪಡೆದ ಮಾಹಿತಿಯ ಆಧಾರದಲ್ಲಿ ತಿಳಿಸಿದ್ದಾರೆ.

ಸರ್ಕಾರದ ಪ್ರಕಾರ, ಉನ್ನತ ನ್ಯಾಯಾಂಗದ ವಿರುದ್ಧ ಬರುವ ದೂರುಗಳನ್ನು ಇನ್-ಹೌಸ್ ಪ್ರಕ್ರಿಯೆಯಡಿ ನಿರ್ವಹಿಸಲಾಗುತ್ತದೆ. ಮುಖ್ಯ ನ್ಯಾಯಮೂರ್ತಿಗಳು ಸುಪ್ರೀಂ ಕೋರ್ಟ್ ನ್ಯಾಯಾಧೀಶರ ವಿರುದ್ಧದ ದೂರುಗಳನ್ನು ಸ್ವೀಕರಿಸಲು ಸಬಲರಾಗಿದ್ದು, ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳು ತಮ್ಮ ಕೋರ್ಟ್‌ನ ನ್ಯಾಯಾಧೀಶರ ವಿರುದ್ಧದ ದೂರುಗಳನ್ನು ಪರಿಶೀಲಿಸುತ್ತಾರೆ.

ಸಿಪಿಜಿಆರ್‌ಎಎಂಎಸ್ (ಕೇಂದ್ರೀಕೃತ ಸಾರ್ವಜನಿಕ ದೂರು ನಿವಾರಣೆ ಮತ್ತು ಮೇಲ್ವಿಚಾರಣಾ ವ್ಯವಸ್ಥೆ) ಅಥವಾ ಇತರ ಮೂಲಗಳ ಮೂಲಕ ಬರುವ ದೂರುಗಳನ್ನು ಸಂಬಂಧಪಟ್ಟ ಮುಖ್ಯ ನ್ಯಾಯಮೂರ್ತಿಗಳಿಗೆ ರವಾನಿಸಲಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !