February 13, 2026
Friday, February 13, 2026
spot_img

ಬೆಂಗಳೂರಿನ ಹೆಣ್ಮಕ್ಕಳಿಗೆ ಖುಷಿಯೋ ಖುಷಿ, ನಾಳೆಯಿಂದ ಸಖಿ ಆಟೋ ಓಡಾಟ ಶುರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜಧಾನಿ ಬೆಂಗಳೂರಿನ ಹೆಣ್ಮಕ್ಕಳಿಗೆ ಖುಷಿ ಸುದ್ದಿ ಸಿಕ್ಕಿದೆ. ನಾಳೆಯಿಂದಲೇ ಪಿಂಕ್‌ ಆಟೋ ಸಖಿ ಓಡಾಟ ಆರಂಭವಾಗಲಿದೆ.ಪ್ರಯಾಣದ ಸಮಯದಲ್ಲಿ ಮಹಿಳೆಯರ ಮೇಲೆ ಆಗುವ ದೌರ್ಜನ್ಯ, ಕೆಟ್ಟ ಅನುಭವಗಳನ್ನು ತಡೆಗಟ್ಟಲು ಸಖಿ ಆಟೋ ರಸ್ತೆಗೆ ಇಳಿದಿದೆ.

ಸಖಿ ಎಂದರೆ ಸ್ನೇಹಿತೆ ಎಂದರ್ಥ. ಸ್ನೇಹದಲ್ಲಿಯೇ ಈ ಸೇವೆ ನಡೆಯಲಿದೆ. ಮಹಿಳಾ ಚಾಲಕರಿರುವ ಈ ಸಖಿ ಆಟೋ ರಾತ್ರಿ ಹನ್ನೆರಡು ಗಂಟೆವರೆಗೂ ಕಾರ್ಯ ನಿರ್ವಹಿಸಲಿದೆ.

ಪ್ರಾಯೋಗಿಕವಾಗಿ ಜನವರಿಯಲ್ಲಿ ಈ ಸೇವೆ ಆರಂಭಿಸಲಾಗಿದ್ದು, 17 ಯಶಸ್ವಿ ಟ್ರಿಪ್ ನಡೆಸಲಾಗಿದೆ. 21 ರಿಂದ 40 ವರ್ಷದೊಳಗಿನ 50 ಮಂದಿ ಚಾಲಕಿಯರಿದ್ದಾರೆ. ಸಖಿ ಆಟೋ ದರ ಪೀಕ್‌ ಅವರ್‌ನಲ್ಲಿಯೂ ಬದಲಾಗೋದಿಲ್ಲ.

ಮೊದಲ ಎರಡು ಕಿಲೋಮೀಟರ್ 50 ಇದ್ದರೆ, ಅನಂತರ ಪ್ರತಿ ಕಿಲೋಮೀಟರ್​ಗೆ 20 ಹೆಚ್ಚುವರಿ ದರ ವಿಧಿಸಲಾಗಿದೆ. ಬೆಳಗ್ಗೆ 6 ರಿಂದ ರಾತ್ರಿವರೆಗೂ ಈ ಸೇವೆ ಇರಲಿದೆ. ಮುಂದಿನ ದಿನಗಳಲ್ಲಿ 24 ಗಂಟೆಗಳ ಕಾಲ ಆಟೋ ಸೇವೆ ನೀಡುವ ಗುರಿ ಹೊಂದಿದೆ. ಸಖಿ ಆಟೋ ಬುಕ್ ಮಾಡಲು ವ್ಯಾಟ್ಸ್​ಆ್ಯಪ್​ ಸಂಖ್ಯೆ 6361933364 ಹಾಗೂ ride.sakhiwomen.in ಜಾಲತಾಣಕ್ಕೆ ಹೋಗಿ ಆಟೋ ಬುಕ್ ಮಾಡಬಹುದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !