February 13, 2026
Friday, February 13, 2026
spot_img

ಯವಕನ ಜೊತೆ ಹೊಟೇಲ್ ರೂಮ್ ಹೋದ ಯುವತಿ ದಿಢೀರ್ 4ನೇ ಮಹಡಿಯಿಂದ ಜಂಪ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಯುವಕನೊಂದಿಗೆ ಹೊಟೇಲ್ ರೂಮ್ ಗೆ ಹೋದ 20ರ ಹರೆಯದ ಯುವತಿ, ಕೆಲ ಹೊತ್ತಿನಲ್ಲಿ ಹೊಟೇಲ್ ನ ನಾಲ್ಕನೇ ಮಹಡಿಯಿಂದ ಕೆಳಕ್ಕೆ ಹಾರಿದ ಘಟನೆ ದೆಹಲಿಯ ಫರ್ಶ್ ಬಜಾರ್‌ನಲ್ಲಿ ನಡೆದಿದೆ.

ರೂಮ್ ಕಿಟಕಿಯಿಂದ ಕೆಳಕ್ಕೆ ಹಾರಿದ ಯುವತಿಯನ್ನು ಸ್ಥಳೀಯರು,ಹೊಟೇಲ್ ಸಿಬ್ಬಂದಿ ತಕ್ಷಣವೇ ಆಸ್ಪತ್ರೆ ದಾಖಲಿಸಿದ್ದಾರೆ. ಗಂಭೀರವಾಗಿ ಗಾಯಗೊಡಿರುವ ಯುವತಿ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಏನಿದು ಘಟನೆ?
ಉತ್ತರ ಪ್ರದೇಶದ ಬುಲಂದ್‌ಶಹರ್ ನಿವಾಸಿ 22ರ ಹರೆಯದ ಯುವಕ, ದೆಹಲಿಯ ಸುಂದರಿ ನಗರದ ನಿವಾಸಿ 20ರ ಹರೆಯದ ಯುವತಿ ಜೊತೆ ಫರ್ಶ್ ಬಜಾರ್‌ನಲ್ಲಿರುವ ಹೊಟೇಲ್ ಗೆ ತೆರಳಿದ್ದಾರೆ. ರೂಮ್ ಬುಕ್ ಮಾಡಿ ಇಬ್ಬರು ಕೊಠಡಿಗೆ ತೆರಳಿ ಬಾಗಿಲ ಕ್ಲೋಸ್ ಮಾಡಿದ್ದಾರೆ. ಸರಿಸುಮಾರು 20 ನಿಮಿಷಗಳ ಬಳಿಕ ಯುವತಿ ಹೊಟೇಲ್ ಕಿಟಕಿ ಮೂಲಕ ಕೆಳಕ್ಕೆ ಹಾರಿದ್ದಾಳೆ. ಹಾಗಿದ್ದರೆ ಯವಕನ ಜೊತೆ ಖುಷಿಯಾಗಿ ಹೊಟೇಲ್ ರೂಮ್ ಸೇರಿಕೊಂಡ ಯುವತಿ ದಿಢೀರ್ ಕೆಳಕ್ಕೆ ಹಾರಲು ಕಾರಣವೇನು? ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪೊಲೀಸರ ಪ್ರಾಥಮಿಕ ಮಾಹಿತಿ ಪ್ರಕಾರ, ಹೊಟೇಲ್ ಕೊಠಡಿಯಲ್ಲಿ ಯುವತಿ ಹಾಗೂ ಯುವಕ ಕೆಲ ವಿಚಾರ ಕುರಿತು ವಾಗ್ವಾದ ನಡೆಸಿದ್ದಾರೆ. ವಾಗ್ವಾದ ತಾರಕಕ್ಕೇರಿದೆ. ಇದರ ಬೆನ್ನಲ್ಲೇ ಯುವತಿ ಆಕ್ರೋಶದಿಂದ ಕೆಳಕ್ಕೆ ಹಾರಿದ್ದಾಳೆ ಎಂದು ವರದಿಯಾಗಿದೆ.

ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. 22ರ ಹರೆಯದ ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದರೆ. ಇತ್ತ ಯುವತಿ ಪ್ರಾಣಾಪಾಯದಿಂದ ಪಾರಾದರೂ ಗಂಭೀರವಾಗಿ ಗಾಯಗೊಂಡಿದ್ದಾಳೆ. ಹಲವು ಮೂಳೆ ಮುರಿದಿದೆ. ಹೀಗಾಗಿ ಸುದೀರ್ಘ ಚಿಕಿತ್ಸೆಯ ಅವಶ್ಯಕತೆ ಇದೆ. ಸದ್ಯ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರಣ ಯುವತಿ ಹೇಳಿಕೆ ದಾಖಲಿಸಲಾಗಿಲ್ಲ. ಇತ್ತ ಫಾರೆನ್ಸಿಕ್ ತಂಡ ಸ್ಥಳಕ್ಕೆ ಧಾವಿಸಿ ಸಾಕ್ಷ್ಯಗಳ ಪರಿಶೀಲನೆ ನಡೆಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !