February 14, 2026
Saturday, February 14, 2026
spot_img

ಚಿನ್ನಸ್ವಾಮಿ ಮೈದಾನದಲ್ಲಿ ದಿಗ್ಗಜರಿಗೆ ಗೌರವ: ಸ್ಟ್ಯಾಂಡ್‌ಗಳಿಗೆ ಮೂವರ ಹೆಸರಿಟ್ಟ KSCA

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಗರದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕರ್ನಾಟಕ ಕ್ರಿಕೆಟ್‌ನ ಮಹಾನ್ ಆಟಗಾರರಾದ ಅನಿಲ್ ಕುಂಬ್ಳೆ ಹಾಗೂ ರಾಹುಲ್ ದ್ರಾವಿಡ್ ಅವರ ಹೆಸರನ್ನು ಎರಡು ಪ್ರಮುಖ ಸ್ಟ್ಯಾಂಡ್‌ಗಳಿಗೆ ನಾಮಕರಣ ಮಾಡಲಾಗಿದೆ. ಫೆಬ್ರವರಿ 13, 2024ರಂದು ನಡೆದ ವಿಶೇಷ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಈ ನಿರ್ಧಾರವನ್ನು ಅಧಿಕೃತವಾಗಿ ಘೋಷಿಸಿತು.

ಸುವರ್ಣ ಮಹೋತ್ಸವದ ಅಂಗವಾಗಿ ಪೆವಿಲಿಯನ್ ಎಂಡ್ ಅನ್ನು ‘ಅನಿಲ್ ಕುಂಬ್ಳೆ ಎಂಡ್’ ಎಂದು, ನಾರ್ತ್ ಎಂಡ್ ಅನ್ನು ‘ರಾಹುಲ್ ದ್ರಾವಿಡ್ ಎಂಡ್’ ಎಂದು ಮರುನಾಮಕರಣ ಮಾಡಲಾಗಿದೆ. ಜೊತೆಗೆ, ಮತ್ತೊಂದು ಸ್ಟ್ಯಾಂಡ್‌ಗೆ ಭಾರತ ಮಹಿಳಾ ತಂಡದ ಮಾಜಿ ನಾಯಕಿ ಶಾಂತಾ ರಂಗಸ್ವಾಮಿ ಅವರ ಹೆಸರನ್ನು ನೀಡಲಾಗಿದೆ.

ಇದನ್ನೂ ಓದಿ:

ಈ ಗೌರವ ಕುರಿತು ಮಾತನಾಡಿದ ದ್ರಾವಿಡ್, ಈ ಮೈದಾನ ತನಗೆ ಎರಡನೇ ಮನೆ ಎಂದು ಭಾವುಕರಾಗಿ ಹೇಳಿದರು. ಕುಂಬ್ಳೆ ಕೂಡ ಬಾಲ್ಯದಲ್ಲಿ ಪ್ರೇಕ್ಷಕರಾಗಿ ಬಂದಿದ್ದ ಮೈದಾನದಲ್ಲಿ ಇಂದು ತನ್ನ ಹೆಸರಿನ ಸ್ಟ್ಯಾಂಡ್ ಇರುವುದೇ ಹೆಮ್ಮೆ ಎಂದರು.

ನವೀಕರಣದ ಬಳಿಕ 2026ರಲ್ಲಿ ಇಲ್ಲಿ ಪ್ರಮುಖ ಪಂದ್ಯಗಳು ನಡೆಯಲಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ತವರು ಪಂದ್ಯಗಳಿಗೂ ಆತಿಥ್ಯ ನೀಡಲಿದೆ. ಸೌರಶಕ್ತಿ ಮತ್ತು ಅತ್ಯಾಧುನಿಕ ಸಬ್‌ಏರ್ ವ್ಯವಸ್ಥೆಯು ಈ ಮೈದಾನದ ಪ್ರಮುಖ ವಿಶೇಷತೆಗಳಾಗಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !