September 28, 2026
Monday, September 28, 2026
spot_img

ಸಾವಿರ ದಿನಗಳಲ್ಲಿ ಸಿದ್ಧರಾಮಯ್ಯ ಸರಕಾರ ಮಾಡಿದ್ದೇನು? ಸಮಸ್ಯೆಗಳ ಪಟ್ಟಿ ರಿಲೀಸ್ ಮಾಡಿದ ಆರ್.ಅಶೋಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿಎಂ ಸಿದ್ಧರಾಮಯ್ಯ ಅವರ ನೇತೃತ್ವದ ರಾಜ್ಯ ಸರ್ಕಾರ ಸಾವಿರ ದಿನದಲ್ಲಿ ತನ್ನ ಸಾಧನೆ ಶೂನ್ಯ ಎಂಬುದನ್ನು ಮರೆತು ಬಿಟ್ಟಿದೆ ಎಂಬುದಾಗಿ ಪ್ರತಿಪಕ್ಷ ನಾಯಕ ಆರ್.ಅಶೋಕ್ ವಾಗ್ಧಾಳಿ ನಡೆಸಿದ್ದಾರೆ.

ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಸಾವಿರ ದಿನಗಳಲ್ಲಿ ಪಂಚ ಗ್ಯಾರಂಟಿ ಬಿಟ್ಟು ಯಾವುದೇ ಹೊಸ ಯೋಜನೆ ಘೋಷಿಸಿಲ್ಲ, ಅವುಗಳೂ ಸರಿಯಾಗಿ ತಲುಪುತ್ತಿಲ್ಲ, ರಾಜ್ಯದಲ್ಲಿ ಅಭಿವೃದ್ಧಿ ಎನ್ನುವುದು ಕನಸಿನ ಮಾತಾಗಿದೆ, ಬೆಲೆ ಏರಿಕೆಯೇ ಕಾಂಗ್ರೆಸ್‌ ಸರ್ಕಾರದ ಅತಿದೊಡ್ಡ ಸಾಧನೆಯಾಗಿದೆ. ಸಾವಿರ ದಿನಗಳಲ್ಲಿ ಕಾಂಗ್ರೆಸ್ ಮಾಡಿರುವ ಏಕೈಕ ಕಾರ್ಯ ಎಂದರೆ ಭ್ರಷ್ಟಾಚಾರ, ಅಕ್ರಮ ಮಾತ್ರ ಎಂದಿದ್ದಾರೆ.

ಸಿಎಂ ಸಿದ್ದರಾಮಯ್ಯ ಸರ್ಕಾರದ ನಿರರ್ಥಕ ಸಾವಿರ ದಿನಗಳಲ್ಲಿ ಕನ್ನಡಿಗರಿಗೆ ಕಾಂಗ್ರೆಸ್‌ ಕೊಟ್ಟ ಸಮಸ್ಯೆಗಳು…

  • ರೈತರಿಗೆ ನೇಣು ಭಾಗ್ಯ
  • ಯುವಕರಿಗೆ ಚಿಪ್ಪು ಭಾಗ್ಯ
  • ಜನರಿಗೆ ದರ ಹೆಚ್ಚಳದ ಬರೆ
  • ಅಭಿವೃದ್ಧಿ ಶೂನ್ಯ
  • ಭ್ರಷ್ಟಾಚಾರ
  • ದಲಿತ ಹಾಗೂ ಶೋಷಿತ ಸಮುದಾಯಕ್ಕೆ ವಂಚನೆ
  • ಹಗರಣಗಳಿಗೆ ಆದ್ಯತೆ
  • ಕನ್ನಡಿಗರ ತೆರಿಗೆಗೆ ಕನ್ನ
  • ಡ್ರಗ್ಸ್‌ ದಂಧೆಗೆ ರಕ್ಷಣೆ
  • ಕಾನೂನು ಸುವ್ಯವಸ್ಥೆ ಹಳ್ಳಕ್ಕೆ
  • ಬಡವರ ಅಕ್ಕಿಗೆ ಕನ್ನ
  • ₹5000 ಕೋಟಿ ಗೃಹಲಕ್ಷ್ಮಿ ಹಣ ಕಾಂಗ್ರೆಸ್ಸಿಗರ ಪಾಲು
  • ಕೊಟ್ಟ ಭರವಸೆ ಈಡೇರಿಸದೆ ಕನ್ನಡಿಗರಿಗೆ ದ್ರೋಹ

    ಕಾಂಗ್ರೆಸ್‌ ಸೃಷ್ಟಿಸಿದ ಸಮಸ್ಯೆಗಳ ಸಂಖ್ಯೆ ಲೆಕ್ಕಕ್ಕಿಲ್ಲದಷ್ಟಿವೆ, ಇವು ಸ್ಯಾಂಪಲ್‌ಗಳಷ್ಟೇ ಎಂಬುದಾಗಿ ಪ್ರತಿ ಪಕ್ಷ ನಾಯಕ ಆರ್.ಅಶೋಕ್ ವಾಗ್ಧಾಳಿ ನಡೆಸಿದ್ದಾರೆ.

Must Read