ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ತಮಿಳುನಾಡಿನ ಮಧುರೈಯಲ್ಲಿ ಅಭಿಮಾನಿಯೊಬ್ಬರು ಮಾಡಿದ ವಿಶಿಷ್ಟ ಆಚರಣೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.
ನಟ ರಜನಿಕಾಂತ್ ಅವರ ಮೇಲೆ ಅಪಾರ ಅಭಿಮಾನ ಹೊಂದಿರುವ ಕಾರ್ತಿಕ್ ಎಂಬ ಯುವಕ, ಮನೆಯೊಳಗೆ ನಿರ್ಮಿಸಿದ ಸಣ್ಣ ದೇವಾಲಯದಲ್ಲಿ ರಜನಿಕಾಂತ್ ಅವರ ಚಿತ್ರಕ್ಕೆ ಪೂಜೆ ಸಲ್ಲಿಸಿದ್ದಾನೆ. ಶಿವನ ವೇಷದಲ್ಲಿರುವ ಪೋಸ್ಟರ್‌ಗೆ ಹಾಲಿನ ಅಭಿಷೇಕ ಮಾಡಿ, ಆರತಿ ಬೆಳಗಿ ಹೂವಿನ ಹಾಗೂ ವಡೆಯ ಹಾರವನ್ನು ಹಾಕಿ ಪೂಜೆ ಮಾಡಿದ ದೃಶ್ಯ ವೈರಲ್ ಆಗಿದೆ.
ಇದನ್ನೂ ಓದಿ:
ಕಳೆದ 3 ವರ್ಷಗಳಿಂದ ಪ್ರತಿ ಶಿವರಾತ್ರಿ ದಿನ ಇದೇ ರೀತಿಯಲ್ಲಿ ಆಚರಣೆ ಮಾಡುತ್ತಿದ್ದೇನೆ ಎಂದು ಅಭಿಮಾನಿ ಹೇಳಿಕೊಂಡಿದ್ದಾನೆ. ರಜನಿಕಾಂತ್ ಅವರ 50 ವರ್ಷದ ಸಿನಿಮಾ ಪಯಣವನ್ನು ನೆನಪಿಸಿಕೊಳ್ಳಲು 500 ವಡೆಗಳ ಹಾರ ಹಾಕಲಾಗಿದೆ ಎಂದು ಆತ ತಿಳಿಸಿದ್ದಾನೆ. ಈ ವಿಡಿಯೋ ವೈರಲ್ ಆಗುತ್ತಿದಂತೆ ಕೆಲವರು ಅಭಿಮಾನವನ್ನು ಮೆಚ್ಚಿಕೊಂಡರೆ, ಇನ್ನೂ ಕೆಲವರು ಮನುಷ್ಯರನ್ನು ದೇವರಂತೆ ಪೂಜಿಸುವುದು ಅತಿರೇಕ ಎಂದರೆ, ಇನ್ನು ಕೆಲವ್ರು ಹುಚ್ಚು ಅಭಿಮಾನ ಎಂದು ಟೀಕೆ ಮಾಡಿದ್ದಾರೆ.



