October 7, 2026
Wednesday, October 7, 2026
spot_img

ಸರ್ಕಾರಿ ಬಸ್ ಬ್ರೇಕ್ ಫೇಲ್: ಸರಣಿ ಆಕ್ಸಿಡೆಂಟ್- 2 ಬಸ್, ಆಟೋ ಜಖಂ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೈಸೂರು ನಗರದ ನಗರ ಸಾರಿಗೆ ಬಸ್ ನಿಲ್ದಾಣದ ಮುಂಭಾಗ ಭಾನುವಾರ ಸರಣಿ ಅಪಘಾತ ಸಂಭವಿಸಿದೆ.

ಸರ್ಕಾರಿ ಸಾರಿಗೆ ಬಸ್ ನಿಯಂತ್ರಣ ತಪ್ಪಿ ಮೊದಲು ಮುಂಭಾಗದಲ್ಲಿದ್ದ ಇನ್ನೊಂದು ನಗರ ಸಾರಿಗೆ ಬಸ್‌ಗೆ ಡಿಕ್ಕಿ ಹೊಡೆದಿದೆ. ಆ ಹೊಡೆತದ ಪರಿಣಾಮವಾಗಿ ಮುಂದೆ ಸಾಗುತ್ತಿದ್ದ ಆಟೋಗೂ ಬಸ್ ಗುದ್ದಿದೆ. ಘಟನೆಯಿಂದ 2 ಬಸ್ ಮತ್ತು 1 ಆಟೋಗೆ ಹಾನಿಯಾಗಿದೆ. ವಾಹನಗಳ ಮುಂಭಾಗ ಭಾಗಶಃ ಜಖಂಗೊಂಡಿದ್ದು, ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.

ಅಪಘಾತ ಸಂಭವಿಸಿದ ತಕ್ಷಣ ವಾಹನಗಳು ರಸ್ತೆಯ ಮಧ್ಯೆ ನಿಂತು ಹೋಗಿದ್ದರಿಂದ ಸಂಚಾರಕ್ಕೆ ತೊಂದರೆ ಉಂಟಾಯಿತು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ವಾಹನಗಳನ್ನು ತೆರವುಗೊಳಿಸಿ ಸಂಚಾರವನ್ನು ಪುನಃ ಆರಂಭಿಸಿದರು. ಘಟನೆಯಲ್ಲಿ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:

ಬಸ್‌ನ ತಾಂತ್ರಿಕ ದೋಷವೇ ಅಪಘಾತಕ್ಕೆ ಕಾರಣವೋ ಅಥವಾ ನಿರ್ಲಕ್ಷ್ಯವೋ ಎಂಬುದರ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

Must Read