ಮೇಷ
ಉದ್ದೇಶಿಸಿದ ಕಾರ್ಯ ಸಫಲ. ಮಾನಸಿಕ ಗೊಂದಲ ನಿವಾರಣೆ. ಆರೋಗ್ಯದ ಕುರಿತಾದ ಚಿಂತೆ ಪರಿಹಾರ. ಬಂಧು ವಿರಸ ಶಮನ. ನಿರಾಳತೆ.
ವೃಷಭ
ನಿಮ್ಮ ದೈನಂದಿನ ಕಾರ್ಯ ಪೂರೈಸಲು ಗಮನ ಕೊಡಿ. ನಿಮಗೆ ಸಂಬಂಽಸದ ವಿಚಾರಕ್ಕೆ ತಲೆ ಕೆಡಿಸಿಕೊಳ್ಳಬೇಡಿ. ಸಂಘರ್ಷಕ್ಕೆ ಇಳಿಯದಿರಿ.
ಮಿಥುನ
ದಿನದ ಆರಂಭ ಉತ್ಸಾಹಕ್ಕೆ ಭಂಗ. ನಿರಾಶೆ. ಬಳಿಕ ಉತ್ಸಾಹ ತುಂಬುವ ಬೆಳವಣಿಗೆ. ಕೆಲ ವ್ಯಕ್ತಿಗಳ ಕಿರಿಕಿರಿ ನಿವಾರಣೆಯಾಗಲಿದೆ.
ಕಟಕ
ಆಹಾರದ ವಿಷಯದಲ್ಲಿ ಜಾಗ್ರತೆ ಇರಲಿ. ಆರೋಗ್ಯ ಕೆಡಿಸಿಕೊಳ್ಳಬೇಡಿ. ಕುಟುಂಬದಲ್ಲಿ ಸಣ್ಣಪುಟ್ಟ ಮನಸ್ತಾಪ ಸಂಭವ.
ಸಿಂಹ
ಕೌಟುಂಬಿಕ ಸಮಸ್ಯೆ. ಅದನ್ನು ಪರಿಹರಿಸಲು ಸಂಯಮದ ಹೆಜ್ಜೆಯಿಡಿ. ವೃತ್ತಿ ವ್ಯವಹಾರದಲ್ಲಿ ಹಿನ್ನಡೆ ಉಂಟಾದೀತು. ಸಹಕಾರ ಪಡೆಯಿರಿ. ಕನ್ಯಾ
ದುಸ್ಸಾಹಸಕ್ಕೆ ಮುಂದಾಗಬೇಡಿ. ಎಚ್ಚರ ವಹಿಸಿ. ಉದ್ಯೋಗದಲ್ಲಿ ಕಿರಿಕಿರಿ. ಕೆಲವರ ಅಸಹಕಾರ. ಮನೆಯಲ್ಲಿ ಸೌಹಾರ್ದ ಪರಿಸರ.
ತುಲಾ
ಯಾವುದೇ ಕೆಲಸ ಯೋಚಿಸಿ ನಡೆಸಿ. ಗೊಂದಲಕ್ಕೆ ಆಸ್ಪದ ನೀಡದಿರಿ. ಕೌಟುಂಬಿಕ ಹೊರೆ ಹೆಚ್ಚಲಿದೆ. ಬಂಧು ಜತೆ ವಿರಸವಾದೀತು.
ವೃಶ್ಚಿಕ
ನಿಮ್ಮ ಕಾಳಜಿಯ ವಿಷಯಕ್ಕೆ ಗಮನ ಹರಿಸಿ. ಉಳಿದೆಲ್ಲ ವಿಚಾರ ಬಿಡಿ. ನಿಮ್ಮ ವರ್ತನೆಯಲ್ಲಿ ಬದಲಾವಣೆ ತರಬೇಕಾದ ಪ್ರಸಂಗ ಬಂದೀತು.
ಧನು
ವಿವಿಧ ವಿಷಯದಲ್ಲಿ ಒತ್ತಡ ಎದುರಿಸುವಿರಿ. ಇದರಿಂದ ಖಾಸಗಿ ಬದುಕಿನ ಮೇಲೆ ಪರಿಣಾಮ. ಎಚ್ಚರಿಕೆಯ ಹೆಜ್ಜೆಯಿಡಿ. ಸಿಟ್ಟು ಬೇಡ. ಮಕರ
ಭವಿಷ್ಯದ ದೊಡ್ಡ ಯೋಜನೆ ಕಾರ್ಯಗತ ಮಾಡಲು ಹಿಂಜರಿಕೆ ಬೇಡ. ನಿಧಾನ ಯಶಸ್ಸು ಸಿಗಲಿದೆ. ಚಾಡಿ ಮಾತು ನಂಬಲು ಹೋಗಬೇಡಿ. ಕುಂಭ
ಏಕಕಾಲದಲ್ಲಿ ವಿವಿಧ ಬಗೆಯ ಚಿಂತೆ ಕಾಡಬಹುದು. ವಿಭಿನ್ನ ಪರಿಸ್ಥಿತಿಗಳಿಗೆ ಹೊಂದಿಕೊಂಡು ನಡೆಯುವುದೇ ಸೂಕ್ತ. ಧನವ್ಯಯ.
ಮೀನ
ಮನಸ್ಸು ವಿಚಲಿತ ಆಗುವ ಬೆಳವಣಿಗೆ ನಡೆದೀತು. ಎಚ್ಚರಿಕೆಯ ಹೆಜ್ಜೆಯಿಡಿ. ಆರ್ಥಿಕವಾಗಿ ಸಣ್ಣ ಹಿನ್ನಡೆ. ಬಂಧುಗಳ ಜತೆ ವಿರಸವಾದೀತು.



