ದಿನಭವಿಷ್ಯ: ವೃತ್ತಿಯಲ್ಲಿ ಬಿಡುವಿಲ್ಲದ ದಿನ, ಜವಾಬ್ದಾರಿ ಹೆಚ್ಚು

ಮೇಷ
ಪ್ರಯಾಣವು ಲಾಭಕರ ಆಗಲಿದೆ. ವ್ಯಕ್ತಿಯೊಬ್ಬರ ಕುರಿತಾದ ನಿಮ್ಮ ಅಭಿಪ್ರಾಯ ಬದಲಾಗಬಹುದು. ನೀವು ತಿಳಕೊಂಡುದು ತಪ್ಪು ಎಂಬ ಅರಿವು.

ವೃಷಭ
ಕೆಲವು ಭಾವನಾತ್ಮಕ ಸನ್ನಿವೇಶ ಎದುರಿಸುವಿರಿ. ಆಪ್ತ ವ್ಯಕ್ತಿಗಳಿಂದ ಕಡೆಗಣಿಸಲ್ಪಡುವಿರಿ. ಮನಸ್ಸು ದೃಢವಾಗಿಟ್ಟುಕೊಳ್ಳಿ. ಸಂಘರ್ಷಕ್ಕೆ ಅವಕಾಶ ಕೊಡದಿರಿ.

ಮಿಥುನ
ಹಣಕಾಸಿಗೆ ಸಂಬಂಧಿಸಿ ಪೂರಕ ದಿನ. ವೈಯಕ್ತಿಕವಾಗಿ ಯಾರನ್ನೂ ನಿಂದಿಸಲು ಹೋಗಬೇಡಿ. ಬಳಿಕ ಪಶ್ಚಾತ್ತಾಪ ಪಡಬೇಕಾದೀತು.

ಕಟಕ
ನಿಮ್ಮ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಂಡರೆ ಕೆಲವು ಸಮಸ್ಯೆಗಳಿಗೆ ಪರಿಹಾರ ಸಾಧ್ಯ. ಸಣ್ಣ ವಿಷಯಕ್ಕೂ ರೇಗುವುದು ನಿಲ್ಲಿಸಿ.

ಸಿಂಹ
ಆಪ್ತರೊಂದಿಗೆ ತುಸು ಕಾಲ ಕಳೆಯಿರಿ. ನಿಮ್ಮ ಮನಸ್ಸನ್ನು ಕಾಡುತ್ತಿರುವ ಒತ್ತಡ ಶಮನ ಆಗಬಹುದು. ಸಣ್ಣ ವಿಷಯಕ್ಕೂ ಹೆಚ್ಚು ಚಿಂತೆ ಮಾಡುತ್ತೀರಿ.

ಕನ್ಯಾ
ವೃತ್ತಿಯಲ್ಲಿ ಬಿಡುವಿಲ್ಲದ ದಿನ. ಹೆಚ್ಚು ಹೊಣೆಗಾರಿಕೆ. ಇದೇವೇಳೆ, ಕೌಟುಂಬಿಕ ಸಮ್ಮಿಲನವು ನಿಮ್ಮ ದಿನದ ಒತ್ತಡವನ್ನು ಮರೆಸುವುದು.

ತುಲಾ
ಕೌಟುಂಬಿಕ ವಿಷಯಗಳು ತೃಪ್ತಿದಾಯಕ. ಚಿಂತೆ ಮಾಯ. ಇದರಿಂದ ಮಾನಸಿಕ ನಿರಾಳತೆ. ಉದ್ಯೋಗದಲ್ಲಿನ ಅನಿಶ್ಚಿತತೆ ನಿವಾರಣೆ. ಒಟ್ಟಾರೆ ಶುಭದಿನ.

ವೃಶ್ಚಿಕ
ನಿಮ್ಮ ಕೆಲಸ ನಿರೀಕ್ಷಿತ ಫಲ ನೀಡಿಲ್ಲವೆಂದು ಚಿಂತಿಸದಿರಿ. ಸ್ವಲ್ಪ ಕಾದು ನೋಡಿ, ನಿಮ್ಮ ನಿರೀಕ್ಷೆ ಈಡೇರುವುದು. ವ್ಯಕ್ತಿಯೊಬ್ಬರ ಜತೆ ಪ್ರೀತಿ ಚಿಗುರುವ ಸಾಧ್ಯತೆ.

ಧನು
ಉದಾಸೀನತೆ ನಿಮ್ಮನ್ನು ಕಾಡಬಹುದು. ಕೆಲಸದಲ್ಲಿ ನಿರಾಸಕ್ತಿ. ಅದನ್ನು ಆದಷ್ಟು ಬೇಗ ತೊಡೆದುಕೊಳ್ಳುವುದು ಒಳ್ಳೆಯದು. ಕೌಟುಂಬಿಕ ಉದ್ವಿಗ್ನತೆ.

ಮಕರ
ಆರ್ಥಿಕ ಹಾನಿ ಸಂಭವಿಸಬಹುದು. ಹಾಗಾಗಿ ಎಚ್ಚರದಿಂದ ವ್ಯವಹರಿಸಿ. ಕೆಲವರ ಹುಸಿ ಮಾತಿಗೆ ಮರುಳಾಗಬೇಡಿ. ಖರ್ಚು ಕಡಿಮೆಗೊಳಿಸಿ.

ಕುಂಭ
ಬದಲಾವಣೆಯಿಂದ ದೂರ ಉಳಿಯಬೇಡಿ. ಅದರೊಂದಿಗೆ ಸಾಗುವುದರಲ್ಲೇ ನಿಮಗೆ ಒಳಿತಿದೆ. ಎಲ್ಲರೊಂದಿಗೆ ಹೊಂದಾಣಿಕೆಯನ್ನು ಸಾಧಿಸಿರಿ.

ಮೀನ
ಅಂತರ್ಮಥನಕ್ಕೆ ಕಾರಣವಾಗುವ ಘಟನೆಗಳು ಸಂಭವಿಸುವವು. ನಿಮ್ಮ ಬದುಕನ್ನು ಒರೆಗಲ್ಲಿಗೆ ಹಚ್ಚಲು ಸಕಾಲ. ಕೌಟುಂಬಿಕ ಶಾಂತಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!