February 16, 2026
Monday, February 16, 2026
spot_img

T20 ವಿಶ್ವಕಪ್ | ವಿನ್ ಆದ್ಮೇಲೆ ʼಇದು ಭಾರತʼ ಅಂತ ಸೂರ್ಯಕುಮಾರ್ ಹೇಳಿದ್ಯಾಕೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೊಲಂಬೋದಲ್ಲಿ ನಡೆದ T20 ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ತಂಡ ಶಕ್ತಿಶಾಲಿ ಪ್ರದರ್ಶನ ನೀಡಿತು. ವಿಜಯದ ಬಳಿಕ ನಾಯಕ ಸೂರ್ಯಕುಮಾರ್ ಯಾದವ್ ಸಂತೋಷ ವ್ಯಕ್ತಪಡಿಸಿದ್ದು, ನಾವು ನಿರ್ಧರಿಸಿದ ರೀತಿಯ ಆಟವನ್ನೇ ಮೈದಾನದಲ್ಲಿ ಪ್ರದರ್ಶಿಸಿದ್ದೇವೆ. ಈ ಪಿಚ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದು ಸರಿಯಾದ ತೀರ್ಮಾನವಾಗಿತ್ತು ಎಂದು ಹೇಳಿದರು.

ಆರಂಭದಲ್ಲೇ 1 ವಿಕೆಟ್ ಕಳೆದುಕೊಂಡರೂ ತಂಡ ಆತ್ಮವಿಶ್ವಾಸ ಕಳೆದುಕೊಳ್ಳಲಿಲ್ಲ. ಜವಾಬ್ದಾರಿ ಹೊತ್ತ ಇಶಾನ್ ಕಿಶನ್ 77 ರನ್ ಗಳಿಸಿ ಪಾಕ್ ಬೌಲರ್‌ಗಳನ್ನು ಎದುರಿಸಿದರು. ಅವರ ಧೈರ್ಯಶಾಲಿ ಆಟವೇ ತಂಡಕ್ಕೆ ಬಲವಾಯಿತು. ಪ್ರತಿಯೊಬ್ಬ ಆಟಗಾರನ ಸಹಕಾರದಿಂದಲೇ ಈ ಗೆಲುವು ಸಾಧ್ಯವಾಯಿತು. ಇದು ಭಾರತ, ಇದು ಭಾರತದ ಆಟ ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ:

ಬೌಲಿಂಗ್‌ಗೆ ಅನುಕೂಲಕರವಾಗಿದ್ದ ಪಿಚ್‌ನಲ್ಲಿ ಭಾರತೀಯ ಬೌಲರ್‌ಗಳು ಪಾಕ್ ಬ್ಯಾಟಿಂಗ್ ಕ್ರಮವನ್ನು ಸಂಪೂರ್ಣವಾಗಿ ನಿಯಂತ್ರಿಸಿದರು. 10 ವಿಕೆಟ್‌ಗಳನ್ನು 6 ಮಂದಿ ಬೌಲರ್‌ಗಳು ಹಂಚಿಕೊಂಡಿರುವುದು ತಂಡದ ಒಗ್ಗಟ್ಟಿನ ಪ್ರತೀಕವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !