June 25, 2026
Thursday, June 25, 2026
spot_img

ಒಳ್ಳೆ ಗಾಳಿ ಬೆಳಕು ಇದೆ ಅಂತ ಮನೆಗೆ ಬರೋಬ್ಬರಿ 80 ಸಾವಿರ ಬಾಡಿಗೆ ಕೇಳಿದ ಮಾಲೀಕ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚು ಮಂದಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಾರೆ. ಸ್ವಂತ ಮನೆ ಮಾಡಲು ಸೈಟ್‌ ದುಬಾರಿ, ಕೆಲಸದ ಕಾರಣಕ್ಕೆ ಬರುವ ಜನ ಅಡ್ಜಸ್ಟ್‌ಮೆಂಟ್‌ ಜೀವನ ನಡೆಸುತ್ತಾರೆ.

ಇದೇ ಬೆಂಗಳೂರಿನಲ್ಲಿ ಮೂರು ಸಾವಿರ ರೂಪಾಯಿಗೂ ಮನೆ ಬಾಡಿಗೆಗೆ ಸಿಗುತ್ತದೆ, ಹಾಗೆ ಮೂವತ್ತು ಸಾವಿರಕ್ಕೂ ಸಿಗುತ್ತದೆ. ಆದರೆ ಇಲ್ಲೊಬ್ಬ ಮನೆ ಮಾಲೀಕ ತನ್ನ ಮನೆಯಲ್ಲಿ ಬಿಸಿಲು ಚೆನ್ನಾಗಿ ಬರುತ್ತದೆ ಎಂದು ಹೇಳಿ ಬರೋಬ್ಬರಿ 80 ಸಾವಿರ ಬಾಡಿಗೆ ಕೇಳಿದ್ದಾನೆ.

ಈ ಬಗ್ಗೆ ಎಕ್ಸ್‌ನಲ್ಲಿ ಮಹಿಳೆಯೊಬ್ಬರು ಪೋಸ್ಟ್‌ ಮಾಡಿದ್ದಾರೆ. ನಮ್ಮ ಮನೆಯ ಬಳಿ ಉತ್ತಮವಾಗಿ ಸೂರ್ಯನ ಬೆಳಕು ಬರುತ್ತದೆ. ಒಳ್ಳೆ ಗಾಳಿಯೂ ಬರತ್ತೆ ಹೀಗಾಗಿ 80 ಸಾವಿರ ಬಾಡಿಗೆ ಕೊಡಿ ಎಂದು ಓನರ್‌ ಕೇಳಿದ್ದಾರೆ. ಇದನ್ನು ಕೇಳಿ ಗ್ರಾಹಕರು ದಂಗಾಗಿದ್ದಾರೆ.

ಇದು ಮುಂಬೈ ಅಥವಾ ಬೆಂಗಳೂರಾ ಅಂತ ಡೌಟ್‌ ಆಗ್ತಿದೆ. ಸೂರ್ಯನ ಬೆಳಕಿಗೆ ಪ್ರೀಮಿಯಂ ಸಬ್ಸ್‌ಕ್ರಿಪ್ಷನ್‌ ಇದೆಯಾ? ಬೆಂಗಳೂರು ನನಗೆ ಸರ್ಪೈಸ್‌ ಮಾಡೋದನ್ನು ನಿಲ್ಲಿಸೇ ಇಲ್ಲ ಎಂದು ಬರೆದುಕೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !