September 26, 2026
Saturday, September 26, 2026
spot_img

FOOD | ಢಾಬಾ ಸ್ಟೈಲ್ ಮಟನ್ ಕಾಲಿ ಮಿರ್ಚ್ ಮನೆಯಲ್ಲೇ ಮಾಡಿ! ರೆಸಿಪಿ ಇಲ್ಲಿದೆ

ಢಾಬಾದಲ್ಲಿ ತಯಾರಿಸಿದ ಆಹಾರದ ರುಚಿಗೆ ಬೇರೆ ಯಾವುದೇ ರುಚಿ ಸರಿಸಾಟಿಯಾಗಲಾರದು. ಇದಕ್ಕೆ ಮುಖ್ಯ ಕಾರಣ ಎಂದರೆ, ಅಲ್ಲಿ ಸಿಗುವ ಸ್ಪೆಷಲ್ ಟೇಸ್ಟ್. ಇವತ್ತು ಢಾಬಾ ಸ್ಟೈಲ್ ಮಟನ್ ಕಾಲಿ ಮಿರ್ಚ್ ಟ್ರೈ ಮಾಡೋಣ.

ಬೇಕಾಗುವ ಸಾಮಗ್ರಿಗಳು

ಮಟನ್ – ಅರ್ಧ ಕೆಜಿ
ಈರುಳ್ಳಿ – 2
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 2 ಚಮಚ
ಕಾಳು ಮೆಣಸು ಪುಡಿ – 2 ಚಮಚ
ಅರಿಶಿನ – ಅರ್ಧ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಕರಿಬೇವು – ಸ್ವಲ್ಪ
ಎಣ್ಣೆ – 3 ಚಮಚ
ಕೊತ್ತಂಬರಿ ಸೊಪ್ಪು – ಅಲಂಕಾರಕ್ಕೆ

ಮಾಡುವ ವಿಧಾನ

ಮೊದಲು ಕುಕ್ಕರ್‌ನಲ್ಲಿ ಮಟನ್‌ಗೆ ಸ್ವಲ್ಪ ಉಪ್ಪು, ಅರಿಶಿನ ಹಾಕಿ ನೀರಿನಲ್ಲಿ ಬೇಯಿಸಿಕೊಳ್ಳಿ. ನಂತರ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಈರುಳ್ಳಿ ಹಾಕಿ ಚೆನ್ನಾಗಿ ಬಂಗಾರದ ಬಣ್ಣ ಬರುವವರೆಗೆ ಕರಿಯಿರಿ. ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹಸಿ ವಾಸನೆ ಹೋಗುವವರೆಗೆ ಹುರಿಯಿರಿ.

ಈಗ ಬೇಯಿಸಿದ ಮಟನ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ ಕಾಳು ಮೆಣಸು ಪುಡಿ, ಉಪ್ಪು ಹಾಕಿ ಕಡಿಮೆ ಉರಿಯಲ್ಲಿ ಹುರಿಯುತ್ತಾ ಬೇಯಿಸಿ. ಮಟನ್‌ಗೆ ಮಸಾಲೆ ಚೆನ್ನಾಗಿ ಹತ್ತಿದ ಮೇಲೆ ಕರಿಬೇವು ಸೇರಿಸಿ ಸ್ವಲ್ಪ ಹೊತ್ತು ಬೇಯಿಸಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಇಳಿಸಿಕೊಳ್ಳಿ.

ಬಿಸಿ ಬಿಸಿ ಚಪಾತಿ, ರೊಟ್ಟಿ ಅಥವಾ ಅನ್ನದ ಜೊತೆ ತಿನ್ನಲು ಈ ಢಾಬಾ ಮಟನ್ ಕಾಲಿ ಮಿರ್ಚ್ ತುಂಬಾ ರುಚಿಯಾಗಿರುತ್ತದೆ.

Must Read