ಹೊರಗೆ ತಿನ್ನೋ ಚೀಸ್ ಗಾರ್ಲಿಕ್ ಬ್ರೆಡ್ ಮನೆಲ್ಲೇ ಮಾಡಬಹುದು ಗೊತ್ತಾ. ಅದೂ ಕೂಡ ತುಂಬಾ ಸಿಂಪಲ್ ಆಗಿ ಕಡಿಮೆ ಸಮಯದಲ್ಲಿ, ಕಡಿಮೆ ಸಾಮಗ್ರಿಗಳಿಂದಲೇ ರೆಡಿ ಆಗುತ್ತೆ.
ಬೇಕಾಗುವ ಸಾಮಗ್ರಿಗಳು
ಬ್ರೆಡ್ ತುಂಡುಗಳು – 6
ಬೆಣ್ಣೆ – 3 ಟೇಬಲ್ ಚಮಚ
ಬೆಳ್ಳುಳ್ಳಿ – 5 ಎಸಳು
ಚೀಸ್ – ಅರ್ಧ ಕಪ್ (ತುರಿದದ್ದು)
ಮೆಣಸಿನ ಪುಡಿ – ಅರ್ಧ ಟೀ ಚಮಚ
ಉಪ್ಪು – ಸ್ವಲ್ಪ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಮಾಡುವ ವಿಧಾನ:
ಮೊದಲು ಒಂದು ಬಟ್ಟಲಿನಲ್ಲಿ ಬೆಣ್ಣೆ ಹಾಕಿ ಅದಕ್ಕೆ ತುರಿದ ಬೆಳ್ಳುಳ್ಳಿ, ಉಪ್ಪು, ಮೆಣಸಿನ ಪುಡಿ ಮತ್ತು ಕೊತ್ತಂಬರಿ ಸೇರಿಸಿ ಚೆನ್ನಾಗಿ ಕಲಸಿ.
ಈ ಮಿಶ್ರಣವನ್ನು ಬ್ರೆಡ್ ತುಂಡುಗಳ ಮೇಲೆ ಸಮವಾಗಿ ಹಚ್ಚಿ. ಅದರ ಮೇಲಿಂದ ತುರಿದ ಚೀಸ್ ಹಾಕಿ.
ಒವನ್ ಇದ್ದರೆ 180 ಡಿಗ್ರಿಯಲ್ಲಿ 8–10 ನಿಮಿಷ ಬೇಯಿಸಬಹುದು. ಒವನ್ ಇಲ್ಲದಿದ್ದರೆ ತವಾ ಮುಚ್ಚಿ ನಿಧಾನವಾದ ಉರಿಯಲ್ಲಿ ಬೇಯಿಸಬಹುದು. ಚೀಸ್ ಕರಗಿ ಬ್ರೆಡ್ ಸ್ವಲ್ಪ ಕ್ರಿಸ್ಪಿ ಆಗಿದ್ರೆ ಗಾರ್ಲಿಕ್ ಬ್ರೆಡ್ ಸಿದ್ಧ.
ಬಿಸಿ ಬಿಸಿ ಇದ್ದಾಗ ತಿಂದರೆ ಇನ್ನೂ ರುಚಿಯಾಗಿರುತ್ತದೆ. ಇದು ಮಕ್ಕಳಿಂದ ದೊಡ್ಡವರ ತನಕ ಎಲ್ಲರೂ ಇಷ್ಟಪಡುವ ಸುಲಭದ ಸ್ನ್ಯಾಕ್.



