ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ವಿಜರ್ಲೆಂಡ್ನಲ್ಲಿ ಭಾರೀ ಹಿಮಪಾತಕ್ಕೆ ರೈಲು ಹಳಿ ತಪ್ಪಿದ್ದು, ಹಲವಾರು ಜನರು ಗಾಯಗೊಂಡಿದ್ದಾರೆ .
ಈ ರೈಲಿನಲ್ಲಿ 80 ಜನರು ಪ್ರಯಾಣಿಸುತ್ತಿದ್ದರು. ಸ್ಥಳೀಯ ಸಮಯ ಬೆಳಿಗ್ಗೆ 7 ಗಂಟೆಗೆ ಈ ಘಟನೆ ಸಂಭವಿಸಿದ್ದು, ಸ್ಟಾಕ್‌ಗ್ರಾಬೆನ್ ಪ್ರದೇಶದಲ್ಲಿ ಹಲವಾರು ಬೋಗಿಗಳು ಹಳಿತಪ್ಪಿದೆ .
ತುರ್ತು ತಂಡಗಳು ಹಳಿಯಲ್ಲಿದ್ದವರನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿದ್ದು, ಆಂಬ್ಯುಲೆನ್ಸ್ ಮತ್ತು ರಕ್ಷಣಾ ಹೆಲಿಕಾಪ್ಟರ್‌ಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಫ್ರುಟಿಜೆನ್-ಬ್ರಿಗ್ ಮಾರ್ಗದಲ್ಲಿ ಸೇವೆಗಳನ್ನು ಮಂಗಳವಾರದವರೆಗೆ ಸ್ಥಗಿತಗೊಳಿಸಲಾಗಿದೆ.
. ಹಿಮಪಾತದಿಂದಾಗಿ ಗೋಪೆನ್‌ಸ್ಟೈನ್ ಮತ್ತು ಬ್ರಿಗ್ ನಡುವೆ ರೈಲು ಸಂಚಾರಕ್ಕೆ ಅಡಚಣೆಯಾಗಿದೆ ಎಂದು ಫೆಡರಲ್ ರೈಲು ಆಪರೇಟರ್ CFF ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.



