ಹೊಸದಿಗಂತ ಡಿಜಿಟಲ್ ಡೆಸ್ಕ್:
ನ್ಯೂಸ್ ಪೋರ್ಟಲ್ ನ್ಯೂಸ್ ಕ್ಲಿಕ್ ಮತ್ತು ಅದರ ಪ್ರಧಾನ ಸಂಪಾದಕ ಪ್ರಬೀರ್ ಪುರ್ಕಾಯಸ್ಥ ಅವರಿಗೆ ಜಾರಿ ನಿರ್ದೇಶನಾಲಯವು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ(ಫೆಮಾ)ಯಡಿ 184 ಕೋಟಿ ರೂ. ದಂಡ ವಿಧಿಸಿದೆ .
ಫೆಮಾ ಉಲ್ಲಂಘನೆ ಆರೋಪದ ಮೇಲೆ ಪಿಪಿಕೆ ನ್ಯೂಸ್ ಕ್ಲಿಕ್ ಸ್ಟುಡಿಯೋ ಪ್ರೈವೇಟ್ ಲಿಮಿಟೆಡ್ ಕಂಪನಿಗೆ 120 ಕೋಟಿ ಹಾಗೂ ಪ್ರಬೀರ್ ಪುರ್ಕಾಯಸ್ಥ ಅವರಿಗೆ 64 ಕೋಟಿ ರೂ. ದಂಡವನ್ನು ವಿಧಿಸಿ ಆದೇಶ ಹೊರಡಿಸಲಾಗಿದೆ.
ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ 2021ರ ಸೆಪ್ಟೆಂಬರ್‌ನಲ್ಲಿ ರಾಷ್ಟ್ರ ರಾಜಧಾನಿಯ ಸೈದುಲಜಬ್ ಪ್ರದೇಶದಲ್ಲಿರುವ ನ್ಯೂಸ್‌ಕ್ಲಿಕ್ ಕಚೇರಿ ಮೇಲೆ ಇಡಿ ದಾಳಿ ಮಾಡಿತ್ತು. ನ್ಯೂಸ್‌ಕ್ಲಿಕ್ ವಿರುದ್ಧ ನ್ಯೂಯಾರ್ಕ್ ಟೈಮ್ಸ್ ತನಿಖೆ ಆಪಾದಿಸಿದ ಕೆಲವು ದಿನಗಳ ನಂತರ ಪ್ರಬೀರ್ ಪುರ್ಕಾಯಸ್ಥ ಅವರನ್ನು ಬಂಧಿಸಲಾಗಿತ್ತು.
ಫೆಮಾ ನಿಬಂಧನೆಗಳನ್ನು ಉಲ್ಲಂಘಿಸಿ ನಾಲ್ಕು ವಿದೇಶಿ ಸಂಸ್ಥೆಗಳ ಮೂಲಕ 28.46 ಕೋಟಿ ರೂಪಾಯಿ(ಅಂದಾಜು) ವಿವರಿಸಲಾಗದ ರಫ್ತು ಹಣ ಸ್ವೀಕರಿಸಿದೆ ಎಂದು ಆರೋಪಿಸಲಾಗಿದೆ. ಈ ನಿಧಿಯನ್ನು ಎಫ್ ಡಿಐ ಎಂದು ತಪ್ಪಾಗಿ ನಿರೂಪಿಸುವ ಮೂಲಕ 9.59 ಕೋಟಿ ರೂಪಾಯಿಗಳ(ಅಂದಾಜು) ವಿದೇಶಿ ನಿಧಿಯ ವಿವರಿಸಲಾಗದ ರಸೀದಿ ಇದೆ ಎಂದು ಆರೋಪಿಸಲಾಗಿದೆ.



