October 3, 2026
Saturday, October 3, 2026
spot_img

ಪಾಕಿಸ್ತಾನಿ ಉಗ್ರ ಸಂಘಟನೆಗಳೊಂದಿಗೆ ನಂಟು ಆರೋಪ: ಭಾಲ್ಕಿ ಮೂಲದ ಯುವಕನ ಬಂಧನ

ಹೊಸದಿಗಂತ ವರದಿ ಬೀದರ್: ​

ಪಾಕಿಸ್ತಾನ ಮೂಲದ ನಿಷೇಧಿತ ಉಗ್ರ ಸಂಘಟನೆಗಳ ಸದಸ್ಯರೊಂದಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಸಂಪರ್ಕ ಹೊಂದಿದ್ದ ಆರೋಪದಡಿ ಭಾಲ್ಕಿ ತಾಲೂಕಿನ ಏಣಕೂರ ಗ್ರಾಮದ 24 ವರ್ಷದ ವಿಶಾಲಕುಮಾರ್‌ ಮೇತ್ರೆ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಈತ ಸಾಮಾಜಿಕ ಜಾಲತಾಣಗಳಾದ ಇನ್‌ಸ್ಟಾಗ್ರಾಮ್‌ ಮತ್ತು ವಾಟ್ಸ್ಯಾಪ್‌ ಮೂಲಕ ನಿಷೇಧಿತ ಭಯೋತ್ಪಾದಕ ಸಂಘಟನೆಗಳ ಸದಸ್ಯರು ಹಾಗೂ ಅಕ್ರಮ ಶಸ್ತ್ರಾಸ್ತ್ರ ಕಳ್ಳ ಸಾಗಾಣಿಕೆ ಮಾಡುವವರೊಂದಿಗೆ ಸಂಪರ್ಕ ಹೊಂದಿದ್ದ ಎನ್ನಲಾಗಿದೆ.

ಇದನ್ನೂ ಓದಿ:

ದೇಶದ ಐಕ್ಯತೆ ಮತ್ತು ಸಮಗ್ರತೆಗೆ ಧಕ್ಕೆಯುಂಟು ಮಾಡುವ ಸಂಘಟನೆಗಳ ಸದಸ್ಯರೊಂದಿಗೆ ಸೇರಿಕೊಂಡು ದೇಶ ವಿರೋಧಿ ಕೃತ್ಯಗಳಲ್ಲಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಪಾಕಿಸ್ತಾನ ಮೂಲದ ನಿಷೇಧಿತ ಸಂಘಟನೆಗಳ ಉಗ್ರರಾದ ಶಹಜಾದ್‌ ಭಟ್ಟಿ, ರಾಣಾ ಹುನೈನಿ ಹಾಗೂ ನೋಮಿ ಖಾನ್‌ ಅವರೊಂದಿಗೆ ವಿಶಾಲಕುಮಾರ್‌ ಮೇತ್ರೆ ಸಂಪರ್ಕದಲ್ಲಿದ್ದ. ಉತ್ತರ ಪ್ರದೇಶದ ಅಶು ಶರ್ಮಾ, ಮಧ್ಯ ಪ್ರದೇಶದ ರಾಜು ಭಾಯ್‌ ಅವರಿಂದ ಅಕ್ರಮವಾಗಿ ಶಸ್ತ್ರಾಸ್ತ್ರ ಸಂಗ್ರಹಿಸಿ ಕಳ್ಳ ಸಾಗಾಣಿಕೆ ಮೂಲಕ ಮಾರಾಟ ಮಾಡುತ್ತಿದ್ದ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಗುಪ್ತಚರ ಇಲಾಖೆಯು ಅನೇಕ ತಿಂಗಳಿಂದ ವಿಶಾಲಕುಮಾರ್‌ ಚಲನವಲನದ ಮೇಲೆ ನಿಗಾ ಇರಿಸಿತ್ತು ಯುಎಪಿಎ ಕಾಯ್ದೆ ಅಡಿ ಖಟಕಚಿಂಚೋಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

Must Read