ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು 2026ನೇ ವರ್ಷದ ಪ್ರಥಮ ಗ್ರಹಣ ಗೋಚರಿಸಲಿದೆ. ಇದು ರಾಹುಗ್ರಸ್ತ ಕಂಕಣ ಸೂರ್ಯಗ್ರಹಣವಾಗಿದ್ದು, ಭಾರತದಲ್ಲಿ ಇದರ ಪ್ರಭಾವ ಇರುವುದಿಲ್ಲ.
ಅಂಟಾರ್ಟಿಕಾ, ದಕ್ಷಿಣ ಅಮೆರಿಕ ಹಾಗೂ ಆಫ್ರಿಕಾ ದೇಶಗಳಲ್ಲಿ ಈ ಗ್ರಹಣ ಕಾಣಿಸಲಿದೆ. ಭಾರತದಲ್ಲಿ ಈ ಗ್ರಹಣ ಗೋಚರ ಇಲ್ಲ, ಆದರೂ ಕೆಲ ರಾಶಿ ಹಾಗೂ ನಕ್ಷತ್ರಗಳ ಮೇಲೆ ಇದರ ಪರಿಣಾಮ ಇರಲಿದೆ.
ಇಂದು ಮಧ್ಯಾಹ್ನ 3:26 ಕ್ಕೆ, ಮಧ್ಯಮ ಕಾಲ ಸಂಜೆ 5:43 ಕ್ಕೆ ಮತ್ತು ಮೋಕ್ಷಕಾಲ ರಾತ್ರಿ 7:57 ಕ್ಕೆ ಇರುತ್ತದೆ. ಇದು ಭಾರತದಲ್ಲಿ ಗೋಚಾರವಿಲ್ಲದಿದ್ದರೂ, ಕರ್ಕಾಟಕ ರಾಶಿ, ಸಿಂಹ ರಾಶಿ, ಮಕರ ರಾಶಿ, ಮತ್ತು ಕುಂಭ ರಾಶಿಯವರ ಮೇಲೆ ತೀವ್ರ ಪರಿಣಾಮಗಳನ್ನು ಮತ್ತು ಬದಲಾವಣೆಗಳನ್ನು ತರಬಹುದು. ರವಿ ಗ್ರಹವನ್ನು ರಾಜಗ್ರಹವೆಂದು ಪರಿಗಣಿಸಲಾಗುತ್ತದೆ.
ಇದು ಆತ್ಮಕಾರಕ ಮತ್ತು ಆರೋಗ್ಯಕಾರಕ ಗ್ರಹವಾಗಿದೆ. ಈ ಗ್ರಹಣವು ರಾಜಕೀಯ, ಆಡಳಿತ, ನಾಯಕರು ಮತ್ತು ಅಧಿಕಾರಿಗಳ ಮೇಲೆ ನಕಾರಾತ್ಮಕ ಪ್ರಭಾವ ಬೀರಬಹುದು. ಧನಿಷ್ಠಾ ನಕ್ಷತ್ರದ ಜೊತೆಗೆ ಮೃಗಶಿರಾ ಮತ್ತು ಚಿತ್ತಾ ನಕ್ಷತ್ರಗಳಿಗೂ ಇದು ಅಷ್ಟೊಂದು ಶುಭಕರವಲ್ಲ ಎನ್ನಲಾಗಿದೆ.
ಗರ್ಭಿಣಿಯರು, ವೃದ್ಧರು, ಮಕ್ಕಳು ಹಾಗೂ ಅನಾರೋಗ್ಯಕ್ಕೆ ತುತ್ತಾದವರು ಈ ಸಮಯದಲ್ಲಿ ಮನೆಯಲ್ಲಿಯೇ ಇರುವುದು ಸೂಕ್ತವಾಗಿದೆ.



