April 7, 2026
Tuesday, April 7, 2026
spot_img

CINE | ಸದ್ದಿಲ್ಲದೆ ಮತ್ತೆ ಬಂದ ರಕ್ಷಿತ್: ಶೆಟ್ರ ಕೈಯಲ್ಲಿದೆ 5 ಸಿನಿಮಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸ್ಯಾಂಡಲ್‌ವುಡ್‌ನಲ್ಲಿ ತಮ್ಮದೇ ಆದ ವಿಭಿನ್ನ ಶೈಲಿಯಿಂದ ಗುರುತಿಸಿಕೊಂಡಿರುವ ನಟ ಹಾಗೂ ನಿರ್ದೇಶಕ ರಕ್ಷಿತ್ ಶೆಟ್ಟಿ ಮತ್ತೆ ಹೊಸ ಉತ್ಸಾಹದೊಂದಿಗೆ ಸಿನಿರಂಗಕ್ಕೆ ಮರಳಲು ಸಿದ್ಧರಾಗಿದ್ದಾರೆ. ತಮ್ಮ ಸ್ವಂತ ಕಥೆಗಳ ಮೂಲಕ ಪ್ರೇಕ್ಷಕರ ಮನ ಗೆದ್ದಿರುವ ಅವರು ಈಗ ಐದು ಹೊಸ ಚಿತ್ರಗಳ ಕಥೆಗಳನ್ನು ಸಿದ್ಧಪಡಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ನಂತರ ಕೆಲ ಕಾಲ ಮೌನವಾಗಿದ್ದ ರಕ್ಷಿತ್, ಹೊಸ ಚಿತ್ರಗಳ ಕಥೆ ಬರವಣಿಗೆಯಲ್ಲಿ ತೊಡಗಿಕೊಂಡಿದ್ದರು. ವಿಶೇಷವಾಗಿ ‘ರಿಚರ್ಡ್ ಆಂಟೊನಿ’ ಮತ್ತು ‘ಪುಣ್ಯಕೋಟಿ’ ಸೇರಿದಂತೆ ಹಲವು ಯೋಜನೆಗಳ ಮೇಲೆ ಅವರು ಗಮನ ಹರಿಸಿದ್ದರು. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ, ಈ ಎಲ್ಲಾ ಕಥೆಗಳು ತಾನು ನಿರೀಕ್ಷಿಸಿದಂತೆ ಚೆನ್ನಾಗಿ ರೂಪುಗೊಂಡಿವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:

ಮಾರ್ಚ್ ತಿಂಗಳ ಅಂತ್ಯದೊಳಗೆ ‘ರಿಚರ್ಡ್ ಆಂಟೊನಿ’ ಹಾಗೂ ‘ಪುಣ್ಯಕೋಟಿ’ ಚಿತ್ರಗಳ ಕೆಲಸ ಒಂದೇ ಸಮಯದಲ್ಲಿ ಆರಂಭವಾಗಲಿದೆ. ‘ಪುಣ್ಯಕೋಟಿ’ ಚಿತ್ರಕ್ಕೆ ಹೆಚ್ಚಿನ ತಾಂತ್ರಿಕ ಕೆಲಸ ಅಗತ್ಯವಾಗಿರುವುದರಿಂದ ಅದರ ಸಿದ್ಧತೆ ಈಗಾಗಲೇ ಆರಂಭವಾಗಿದೆ. ಇನ್ನೊಂದು ಕಡೆ ‘ರಿಚರ್ಡ್ ಆಂಟೊನಿ’ ಚಿತ್ರವೂ ಶೀಘ್ರದಲ್ಲೇ ಚಿತ್ರೀಕರಣಕ್ಕೆ ಸಿದ್ಧವಾಗುತ್ತಿದೆ ಎನ್ನಲಾಗಿದೆ.

‘ಉಳಿದವರು ಕಂಡಂತೆ’ ಚಿತ್ರದಲ್ಲಿದ್ದ ರಿಚ್ಚಿ ಪಾತ್ರವನ್ನು ಆಧರಿಸಿಕೊಂಡು ಹೊಸ ಕಥೆಯನ್ನು ರೂಪಿಸಲಾಗಿದ್ದು, ಈ ಚಿತ್ರದಲ್ಲಿ ರಕ್ಷಿತ್ ಜೊತೆಗೆ ಪ್ರಮೋದ್ ಶೆಟ್ಟಿ ಸಹ ಅಭಿನಯಿಸಲಿದ್ದಾರೆ. ಇತರೆ ಕಲಾವಿದರ ಬಗ್ಗೆ ಮುಂದಿನ ದಿನಗಳಲ್ಲಿ ಅಧಿಕೃತ ಮಾಹಿತಿ ಹೊರಬೀಳಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !