September 28, 2026
Monday, September 28, 2026
spot_img

ಲೈಂಗಿಕ ದೌರ್ಜನ್ಯ ಕೇಸ್ ನಲ್ಲಿ ಮಹಿಳೆಯರು, ಮಕ್ಕಳ ಗೌಪ್ಯತೆ ಕಾಪಾಡುವುದು ಕಡ್ಡಾಯ: ಡಿಜಿ, ಐಜಿಪಿ ಎಂ.ಎ ಸಲೀಂ ಆದೇಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ಮಹಿಳೆಯರು, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಗೌಪ್ಯತೆ ಕಾಪಾಡುವುದು ಕಡ್ಡಾಯ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಡಾಕ್ಟರ್ ಎಂ. ಎ ಸಲೀಂ ಆದೇಶ ಹೊರಡಿಸಿದ್ದಾರೆ.

ಸುಪ್ರೀಂ ಕೋರ್ಟ್ ನ ಪ್ರಕರಣವನ್ನು ಉಲ್ಲೇಖಿಸಿ ಆದೇಶ ಹೊರಡಿಸಿದ ಅವರು, ನೊಂದ ಮಹಿಳೆಯರು ಹಾಗೂ ಅಪ್ರಾಪ್ತರ ವಿಳಾಸ ಗೌಪ್ಯತೆ ಕಾಪಾಡಲು ಸೂಚನೆ ನೀಡಿದ್ದಾರೆ.

ಅದೇ ರೀತಿ ದೂರು ಸ್ವೀಕರಿಸುವ ಸಮಯ ಮೂಲ ದೂರು ಅರ್ಜಿಯನ್ನು ನೊಂದ ಮಹಿಳೆ ಅಥವಾ ಅಪ್ರಾಪ್ತರ ಹೆಸರು ವಿಳಾಸ ಹಾಗೂ ಗುರುತು ಇರಬೇಕು. ಆ ಬಳಿಕ
ಠಾಣಾಧಿಕಾರಿಯ ಅಥವಾ ತನಿಖಾಧಿಕಾರಿ ಗೌಪ್ಯತೆ ಕಾಪಾಡಲು ಮೂಲ ಹೆಸರು ಬದಲಾಯಿಸಬೇಕು ಎಂದು ತಿಳಿಸಿದ್ದಾರೆ.

ನ್ಯಾಯಾಲಯಕ್ಕೆ ದೂರು ನೀಡಬೇಕು ಮತ್ತು ಮುಚ್ಚಿದ ಲಕೋಟೆಯಲ್ಲಿ ದಾಖಲೆಗಳನ್ನು ಸಲ್ಲಿಸಬೇಕು. ಎಫ್ಐಆರ್ ಹೆಸರು ಬದಲಿಸುವಂತೆ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ಟಿಪ್ಪಣಿಯ ವೇಳೆ ಹೆಸರು ಬದಲಾಗಿದೆ ಎಂದು ನಮೂದಿಸಬೇಕು. ಚಾರ್ಜ್ ಶೀಟ್ ಸಹ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಬೇಕು ಎಂಬುದಾಗಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ ಸಲೀಂ ಖಡಕ್ ಆದೇಶ ಮಾಡಿದ್ದಾರೆ.

Must Read