October 17, 2026
Saturday, October 17, 2026
spot_img

HYGINE | ಎಲ್ಲರೂ ಪಾಲಿಸಲೇಬೇಕಾದ ಬಾತ್‌ರೂಮ್‌ ನಿಯಮಗಳಿವು! ಮಿಸ್‌ ಮಾಡೋ ಹಾಗೇ ಇಲ್ಲ

ಬಾತ್‌ರೂಮ್‌ ಕ್ಲೀನಾಗಿಟ್ಟುಕೊಳ್ಳೋದು ಅಷ್ಟೊಂದು ಕಷ್ಟದ ಕೆಲಸ ಅಲ್ಲ. ಹೇಗೆ ಏನು ಯಾವಾಗ ಅನ್ನೋದನ್ನು ಕಲಿತರೆ ಸಾಕು. ಈ ನಿಯಮಗಳನ್ನು ಮಿಸ್‌ ಮಾಡದೇ ಫಾಲೋ ಮಾಡಿ..

ಯಾವಾಗಲೂ ಕಮೋಡ್‌ ಫ್ಲಶ್‌ ಮಾಡುವಾಗ ಲಿಡ್‌ ಮುಚ್ಚಿರಿ. ಗಾಳಿಯಲ್ಲಿ ಹತ್ತು ಫೀಟ್‌ನಷ್ಟು ಎತ್ತರಕ್ಕೂ ಬ್ಯಾಕ್ಟೀರಿಯಾ ಹಾರಬಲ್ಲದು.

ರೋಗನಿರೋಧಕ ವೈಪ್ಸ್‌ ಬಳಸಿ. ಟಾಯ್ಲೆಟ್‌ ಸೀಟ್‌, ಸಿಂಕ್‌, ಫ್ಲಶ್‌ ಹ್ಯಾಂಡಲ್‌ ಹಾಗೂ ಬಾತ್‌ರೂಮ್‌ ಡೋರ್‌ ನಾಬ್‌ಗಳಿಗೆ ವೈಪ್ಸ್‌ ಬಳಸಿ ಅಥವಾ ಸ್ಯಾನಿಟೈಸರ್‌ ಹಾಕಿ.

ವಾರಕ್ಕೊಮ್ಮೆ ಟಾಯ್ಲೆಟ್‌ ಕ್ಲೀನ್‌ ಮಾಡಲೇಬೇಕು. ಕ್ಲೀನರ್‌ ಹಾಕಿ ಅರ್ಧಗಂಟೆ ಬಿಟ್ಟು ನೀಟಾಗಿ ವಾಶ್‌ ಮಾಡಿ.

ಫ್ಲೋರ್‌ ಸದಾ ಡ್ರೈ ಇರುವಂತೆ ನೋಡಿಕೊಳ್ಳಿ. ಪಾಚಿ ಅಥವಾ ಇನ್ನಿತರ ಕೊಳೆ ಕೂರದಂತೆ ಕ್ಲೀನ್‌ ಮಾಡಿ.

ಗಾಳಿ ಬೆಳಕು ಇರುವಂತೆ ಮಾಡಿ. ಇದರಿಂದ ಬ್ಯಾಕ್ಟೀರಿಯಾ ಬೆಳೆಯೋದಿಲ್ಲ.

ಬಾತ್‌ರೂಮ್‌ನಿಂದ ಬಂದ ನಂತರ ಇಪ್ಪತ್ತು ಸೆಕೆಂಡ್‌ ಹ್ಯಾಂಡ್‌ವಾಶ್‌ ಮಾಡಿ.

Must Read