February 19, 2026
Thursday, February 19, 2026
spot_img

CINE | ಬಾಲಿವುಡ್‌ನಲ್ಲಿ ಸಿನಿಮಾ ಆಗಲಿದೆಯಂತೆ ʼಆಪರೇಷನ್‌ ಸಿಂದೂರʼ, ನಿರ್ದೇಶಕ ಯಾರು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಮ್ಮ ಹೆಣ್ಣುಮಕ್ಕಳ ಕುಂಕುಮ ಅಳಿಸಿ, ಆಪರೇಷನ್‌ ಸಿಂದೂರದ ಮೂಲಕ ಹೆಣವಾದವರ ನೈಜ ಘಟನೆ ಸಿನಿಮಾ ಆಗಲಿದೆ.

ಹೌದು, ಪಹಲ್ಗಾಮ್‌ ದಾಳಿಗೆ ಪ್ರತಿಯಾಗಿ ಭಾರತ ಮಾಡಿದ ಆಪರೇಷನ್‌ ಸಿಂದೂರ ಕುರಿತಾದ ಸಿನಿಮಾ ಬಾಲಿವುಡ್‌ನಲ್ಲಿ ಬರಲಿದೆ.

ಈಗಾಗಲೇ ದೇಶಪ್ರೇಮ ಸಾರುವ ಸಿನಿಮಾಗಳನ್ನು ನಿರ್ದೇಶಿಸಿರುವ ವಿವೇಕ್‌ ಅಗ್ನಿಹೋತ್ರಿ ಈ ಸಿನಿಮಾಗೆ ಆಕ್ಷನ್‌ ಕಟ್‌ ಹೇಳಲಿದ್ದಾರೆ. ಆಪರೇಷನ್ ಸಿಂಧೂರದಲ್ಲಿ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ತೊಡಗಿಸಿಕೊಂಡಿದ್ದ ಹಿರಿಯ ಸೈನ್ಯಾಧಿಕಾರಿಗಳನ್ನು ವಿವೆಕ್ ಅಗ್ನಿಹೋತ್ರಿ ಭೇಟಿ ಮಾಡಿದ್ದು ಆಪರೇಷನ್ ಸಿಂಧೂರ ಕುರಿತು ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ ಎನ್ನಲಾಗುತ್ತಿದೆ.

ಕಳೆದ ವರ್ಷ ಏಪ್ರಿಲ್‌ನಲ್ಲಿ ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ದಾಳಿ ಮಾಡಿ 26 ಮಂದಿ ಪ್ರವಾಸಿಗರನ್ನು ಕೊಂದಿದ್ದರು. ಹೆಣ್ಣುಮಕ್ಕಳ ಪಕ್ಕದಲ್ಲೇ ಇದ್ದ ಗಂಡಂದಿರನ್ನು ಕೊಂದು ಕುಂಕುಮ ಅಳಿಸಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !