April 10, 2026
Friday, April 10, 2026
spot_img

ಮಥುರಾದಲ್ಲಿ ಕಾಲುವೆಗೆ ಬಿದ್ದ ಕಾರು: ಮೂವರು ಸಹೋದರರು ಸೇರಿ ನಾಲ್ವರ ದುರ್ಮ*ರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಉತ್ತರ ಪ್ರದೇಶದ ಮಥುರಾದಲ್ಲಿ ಭೀಕರ ಅಪಗಾತ ಸಂಭವಿಸಿದೆ. ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದಿದ್ದು, ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಬುಧವಾರ ರಾತ್ರಿ ನಹ್ಲಾ ದೇವಿಯ ಸೇತುವೆಯ ಬಳಿ ಕಾರು ಮಹಮೂದ್‌ಪುರದಿಂದ ದೀಗ್‌ಗೆ ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.

ರಸ್ತೆಯಲ್ಲಿ ತೀಕ್ಷ್ಣವಾದ ತಿರುವು ಇದ್ದ ಕಾರಣ ಅತಿ ವೇಗದಲ್ಲಿ ಕಾರು ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ತಡೆ ಗೋಡೆಗೆ ಡಿಕ್ಕಿ ಹೊಡೆದು ಕಾಲುವೆಗೆ ಬಿದ್ದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿಸುರೇಶ್ ಚಂದ್ರ ರಾವತ್ ಹೇಳಿದ್ದಾರೆ.

ಮೃತರನ್ನು ರಾಹುಲ್(23) ಮತ್ತು ಅವರ ಸೋದರಸಂಬಂಧಿಗಳಾದ ಅಮಿತ್ (23) ಮತ್ತು ಮೋಹಿತ್ (21) ಎಂದು ಗುರುತಿಸಲಾಗಿದ್ದು, ಎಲ್ಲರೂ ಮಹಾವನ್ ಪೊಲೀಸ್ ಠಾಣೆ ವ್ಯಾಪ್ತಿಯ ಬಲದೇವ್‌ಗಢ ನಿವಾಸಿಗಳು ಎನ್ನಲಾಗಿದೆ. ಮತ್ತೊಬ್ಬರ ಗುರುತು ಪತ್ತೆಯಾಗಿಲ್ಲ. ಆದರೆ ಅವರು ಇಪ್ಪತ್ತರ ಹರೆಯದವರೂ ಮತ್ತು ಈ ಮೂವರ ಸ್ನೇಹಿತ ಎಂದು ಪೊಲೀಸರು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !