September 29, 2026
Tuesday, September 29, 2026
spot_img

ಕ್ರಿಕೆಟ್ ಪಂದ್ಯಾಟದ ವೇಳೆ ಜೇನುನೊಣ ದಾಳಿ: ಅಂಪೈರ್ ಸಾ*ವು, 15 ಕ್ಕೂ ಹೆಚ್ಚು ಆಟಗಾರರಿಗೆ ಗಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉನ್ನಾವೊ ಜಿಲ್ಲೆಯ ಶುಕ್ಲಗಂಜ್ ಪ್ರದೇಶದ ಸಪ್ರು ಮೈದಾನದಲ್ಲಿ ನಡೆದ ಕ್ರಿಕೆಟ್ ಪಂದ್ಯಾಟದ ವೇಳೆ ಜೇನುನೊಣಗಳ ಹಿಂಡು ಅಚಾನಕ್ ದಾಳಿ ನಡೆಸಿದ ಪರಿಣಾಮ ಅಂಪೈರ್ ಒಬ್ಬರು ಪ್ರಾಣಕಳೆದುಕೊಂಡ ಘಟನೆ ನಡೆದಿದೆ.

ಮೃತಪಟ್ಟ ಅಂಪೈರನ್ನು 65 ವರ್ಷದ ಮಾಣಿಕ್ ಗುಪ್ತಾ ಎನ್ನದು ಗುರುತಿಸಲಾಗಿದೆ.

ಪೊಲೀಸರ ಮಾಹಿತಿ ಪ್ರಕಾರ, ಪಂದ್ಯ ನಡೆಯುತ್ತಿದ್ದ ವೇಳೆ ಜೇನುನೊಣಗಳು ಮೈದಾನಕ್ಕೆ ದಾಳಿ ಮಾಡಿದ್ದು, ಆಟಗಾರರು ಹಾಗೂ ಪ್ರೇಕ್ಷಕರು ಆತಂಕದಿಂದ ಓಡಿಹೋಗಿದ್ದಾರೆ. ಈ ಗೊಂದಲದಲ್ಲಿ ಗುಪ್ತಾ ಗಂಭೀರವಾಗಿ ಗಾಯಗೊಂಡು ಪ್ರಜ್ಞೆ ತಪ್ಪಿ ಬಿದ್ದರು. ಆರಂಭದಲ್ಲಿ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ನಂತರ ಸ್ಥಿತಿ ಗಂಭೀರವಾಗಿದ್ದರಿಂದ ಕಾನ್ಪುರದ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾದರು.

ಇದನ್ನೂ ಓದಿ:

ದಾಳಿಯಲ್ಲಿ ಮತ್ತೊಬ್ಬ ಅಂಪೈರ್ ಹಾಗೂ ಸುಮಾರು 15 ರಿಂದ 20 ಆಟಗಾರರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುಪ್ತಾ ಅವರನ್ನು ಆಸ್ಪತ್ರೆಗೆ ಸಾಗಿಸುವಾಗಲೂ ಜೇನುನೊಣಗಳು ಅವರ ದೇಹಕ್ಕೆ ಅಂಟಿಕೊಂಡಿದ್ದವು ಎಂಬುದು ದಾಳಿಯ ತೀವ್ರತೆಯನ್ನು ತೋರಿಸುತ್ತಿತ್ತು.

Must Read