February 19, 2026
Thursday, February 19, 2026
spot_img

FOOD | ಮನೆಯಲ್ಲಿ ಬಾಳೆಹಣ್ಣು ಉಳಿದಿದ್ರೆ ಈ ಸಿಂಪಲ್ ಶೇಕ್ ಮಾಡಿ! ಬಿಸಿಲಿಗೆ ತಂಪಾಗಿರುತ್ತೆ

ಮನೆಯಲ್ಲಿ ಬಾಳೆಹಣ್ಣು ಹೆಚ್ಚು ಮೃದುವಾಗಿ ಉಳಿದಿದೆಯಾ? ಎಸೆದುಬಿಡೋದಕ್ಕಿಂತ ಈ ಸರಳ ಮತ್ತು ರುಚಿಯಾದ ಬಾಳೆಹಣ್ಣು ಶೇಕ್ ಮಾಡಿ ಕುಡಿಯಿರಿ. ಬಿಸಿಲಿನ ದಿನಗಳಲ್ಲಿ ದೇಹಕ್ಕೆ ತಂಪು ನೀಡುವುದಲ್ಲದೆ, ಶಕ್ತಿ ಕೂಡ ತುಂಬುತ್ತದೆ.

ಬೇಕಾಗುವ ಪದಾರ್ಥಗಳು:

2 ಹಣ್ಣಾದ ಬಾಳೆಹಣ್ಣು

1 ಗ್ಲಾಸ್ ತಂಪಾದ ಹಾಲು

2 ಚಮಚ ಸಕ್ಕರೆ (ಅಗತ್ಯವಿದ್ದರೆ)

2–3 ಐಸ್ ಕ್ಯೂಬ್‌ಗಳು

ಸ್ವಲ್ಪ ಏಲಕ್ಕಿ ಪುಡಿ (ಐಚ್ಛಿಕ)

1 ಚಮಚ ಜೇನುತುಪ್ಪ (ಐಚ್ಛಿಕ)

ಮಾಡುವ ವಿಧಾನ:

ಬಾಳೆಹಣ್ಣಿನ ಸಿಪ್ಪೆ ತೆಗೆದು ತುಂಡುಗಳಾಗಿ ಕತ್ತರಿಸಿ ಮಿಕ್ಸಿ ಜಾರಿಗೆ ಹಾಕಿ ಹಾಲು, ಸಕ್ಕರೆ ಹಾಕಿ. ಐಸ್ ಕ್ಯೂಬ್‌ಗಳನ್ನು ಸೇರಿಸಿ ಚನ್ನಾಗಿ ರುಬ್ಬಿಕೊಳ್ಳಿ.

ಕೊನೆಯಲ್ಲಿ ಏಲಕ್ಕಿ ಪುಡಿ ಹಾಗು ಜೇನುತುಪ್ಪ ಸೇರಿಸಿ ಮತ್ತೆ ಒಂದು ಸಾರಿ ಮಿಕ್ಸ್ ಮಾಡಿ.

ಸರಳ ಪದಾರ್ಥಗಳಿಂದ 5 ನಿಮಿಷದಲ್ಲಿ ತಯಾರಾಗುವ ಈ ಶೇಕ್ ನಿಮ್ಮ ಬಿಸಿಲಿನ ದಿನವನ್ನು ತಂಪಾಗಿಸೋದು ಗ್ಯಾರಂಟಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !