ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿ20 ವಿಶ್ವಕಪ್ ನಲ್ಲಿ ಜಿಂಬಾಬ್ವೆ ತನ್ನ ಗೆಲುವಿನ ಓಟ ಮುಂದುವರಿಸಿದ್ದು, ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 6 ವಿಕೆಟ್‌ಗಳಿಂದ ಮಣಿಸಿತು.
ಗುರುವಾರ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಶ್ರೀಲಂಕಾ ತಂಡ, ಪಥುಮ್ ನಿಸಾಂಕ (62 ರನ್) ಹಾಗೂ ಪವನ್ ರತ್ಮ ನಾಯಕೆ (44 ರನ್) ಅವರ ಬ್ಯಾಟಿಂಗ್ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 7 ವಿಕೆಟ್‌ಗಳ ನಷ್ಟಕ್ಕೆ 178 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಎದುರಾಳಿ ಜಿಂಬಾಬ್ವೆಗೆ 179 ರನ್‌ಗಳ ಗುರಿಯನ್ನು ನೀಡಿತು.
ಬಳಿಕ ಗುರಿಯನ್ನು ಹಿಂಬಾಲಿಸಿದ ಜಿಂಬಾಬ್ವೆ ತಂಡ, ಬ್ರಿಯನ್ ಬೆನೆಟ್ ಹಾಗೂ ಸಿಕಂದರ್ ರಾಝಾ ಅವರ ಶಕ್ತಿಯುತ ಬ್ಯಾಟಿಂಗ್ ಬಲದಿಂದ 19.3 ಓವರ್‌ಗಳಿಗೆ 4ವಿಕೆಟ್‌ಗಳ ನಷ್ಟಕ್ಕೆ 182 ರನ್‌ಗಳನ್ನು ಗಳಿಸುವ ಮೂಲಕ ಭರ್ಜರಿ ಗೆಲುವು ದಾಖಲಿಸಿತು. ಆ ಮೂಲಕ ಜಿಂಬಾಬ್ವೆ ಆಡಿದ ನಾಲ್ಕು ಪಂದ್ಯಗಳ ಪೈಕಿ ಮೂರರಲ್ಲಿ ಗೆಲುವು ಪಡೆದು ಸೂಪರ್-8ಕ್ಕೆ ಪ್ರವೇಶ ಮಾಡಿದೆ.



