ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರದ ಟೀಸರ್ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಮೂಡಿಸಿದೆ. ಟ್ರೇಲರ್ ಮಾರ್ಚ್ ಮೊದಲ ವಾರದಲ್ಲಿ ಬರಲಿದೆ ಎನ್ನುವ ನಿರೀಕ್ಷೆಯ ಮಧ್ಯೆ ದಿಢೀರ್ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದೆ.
ಟೀಸರ್‌ನಲ್ಲಿ ಗುಂಡಿನ ಸದ್ದು, ಗಾಢ ವಾತಾವರಣ ಮತ್ತು ಆ್ಯಕ್ಷನ್ ಗಳು ಗಮನ ಸೆಳೆಯುತ್ತವೆ. ‘ರಾಯ’ ಪಾತ್ರದಲ್ಲಿ ಯಶ್ ಅವರ ಸ್ಟೈಲಿಷ್ ಲುಕ್ ಅಭಿಮಾನಿಗಳನ್ನು ಫಿದಾ ಮಾಡಿದೆ. ಚಿತ್ರದಲ್ಲಿ ನಯನತಾರಾ ‘ಗಂಗಾ’ ಪಾತ್ರದಲ್ಲಿ ಮಾಸ್ ಅವತಾರದಲ್ಲಿ ಕಾಣಿಸಿಕೊಂಡರೆ, ಕಿಯಾರಾ ಅಡ್ವಾಣಿ ‘ನಾದಿಯಾ’, ಹುಮಾ ಖುರೇಶಿ ‘ಎಲಿಜಬೆತ್’, ರುಕ್ಮಿಣಿ ವಸಂತ್ ‘ಮೆಲಿಸಾ’, ತಾರಾ ಸುತಾರಿಯಾ ‘ರೆಬೆಕಾ’ ಪಾತ್ರಗಳಲ್ಲಿ ನಟಿಸಿದ್ದಾರೆ. ಉಕ್ರೇನಿಯನ್ ನಟಿ ನಟಾಲಿ ಬರ್ನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ:
ಈ ಹಿಂದೆ ಬಿಡುಗಡೆಯಾದ ದೃಶ್ಯಗಳಲ್ಲಿ ಬೋಲ್ಡ್ ಅಂಶಗಳ ಬಗ್ಗೆ ಚರ್ಚೆ ನಡೆದಿತ್ತು. ಇದೀಗ ಹೊಸ ಟೀಸರ್‌ನಲ್ಲಿ ಕಥೆಯ ತೀವ್ರತೆಯನ್ನೇ ಹೆಚ್ಚು ಹೈಲೈಟ್ ಮಾಡಲಾಗಿದೆ. ನಿರ್ದೇಶಕಿ ಗೀತು ಮೋಹನ್‌ದಾಸ್ ಕಥಾ ಗಂಭೀರತೆಯನ್ನು ತೋರಿಸಲು ಒತ್ತು ನೀಡಿದ್ದಾರೆ.
ಕೆಜಿಎಫ್ ಬಳಿಕ ಯಶ್ ನಟನೆಯ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಸಂಚಲನ ಸೃಷ್ಟಿಸಲಿದೆ ಎಂಬ ಮಾತುಗಳು ಸಿನಿ ವಲಯದಲ್ಲಿ ಕೇಳಿಬರುತ್ತಿವೆ.



