April 11, 2026
Saturday, April 11, 2026
spot_img

AI ಶೃಂಗಸಭೆಯಲ್ಲಿ ಅರೆಬೆತ್ತಲೆ ಪ್ರತಿಭಟನೆ: ಯುವ ಕಾಂಗ್ರೆಸ್‌ ಕಾರ್ಯಕರ್ತರ ಬಂಧನ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ದೆಹಲಿಯ ಭಾರತ್ ಮಂಟಪದಲ್ಲಿ ನಡೆಯುತ್ತಿರುವ ಎಐ ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಶರ್ಟ್ ಬಿಚ್ಚಿ ಪ್ರತಿಭಟನೆ ನಡೆಸಿದರು.

ಪ್ರಧಾನಿ ಮೋದಿ ಹಾಗೂ ಟ್ರಂಪ್ ಫೋಟೋ ಇರುವ ಅಂಗಿಯನ್ನು ಕೈಯಲ್ಲಿ ಹಿಡಿದುಕೊಂಡು ಅರೆನಗ್ನರಾಗಿ ಎಐ ಶೃಂಗಸಭೆಯ ಆವರಣದ ತುಂಬ ಓಡಾಡಿ ಪ್ರತಿಭಟನೆ ನಡೆಸಿದ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ, ಕೇಸ್ ದಾಖಲಿಸಿದ್ದಾರೆ.

ಅಡಿಷನಲ್ ಪೊಲೀಸ್ ಕಮಿಷನರ್ ದೇವೇಶ್ ಕುಮಾರ್ ಮಹ್ಲಾ ಮಾಹಿತಿ ನೀಡಿದ್ದು, ಯೂತ್ ಕಾಂಗ್ರೆಸ್ ಕಾರ್ಯರ್ತರು ಎಂದು ಹೇಳಿಕೊಂಡಿರುವ ಜನರ ಗುಂಪು ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಭಾರತ್ ಮಂಟಪದೊಳಗೆ ಪ್ರವೇಶಿಸಿದ್ದರು. ಅವರು ಸ್ವೆಟರ್ ಮತ್ತು ಜಾಕೆಟ್ ಹಾಕಿಕೊಂಡಿದ್ದರಿಂದ ಸೆಕ್ಯುರಿಟಿಗಳಿಗೆ ಅವರ ಶರ್ಟ್​​ ಮೇಲಿದ್ದ ಮೋದಿ ಹಾಗೂ ಟ್ರಂಪ್ ಫೋಟೋ, ಘೋಷಣೆ ಕಾಣಿಸಿರಲಿಲ್ಲ. ಒಳಗೆ ಬಂದ ನಂತರ ಅವರು ತಮ್ಮ ಜಾಕೆಟ್ ಬಿಚ್ಚಿ ಅಂಗಿಯನ್ನು ಕೈಯಲ್ಲಿ ಹಿಡಿದು ಘೋಷಣೆ ಕೂಗತೊಡಗಿದರು. ಈ ವಿಷಯ ತಿಳಿಯುತ್ತಿದ್ದಂತೆ ಅವರನ್ನು ನಮ್ಮ ವಶಕ್ಕೆ ಪಡೆಯಲಾಯಿತು. ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಿದ್ದೇವೆ. ಈಗಾಗಲೇ ನಾಲ್ವರನ್ನು ಬಂಧಿಸಿದ್ದೇವೆ. ಉಳಿದವರ ವಿಚಾರಣೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !