ದೋಸೆ, ಚಪಾತಿ, ರೊಟ್ಟಿಗೆ ಒಂದೇ ತರಹದ ಚಟ್ನಿ ತಿಂದು ಸಾಕಾಗಿದ್ಯಾ? ಹಾಗಿದ್ರೆ ಒಮ್ಮೆ ಈ ಸವಿಯಾದ ಈರುಳ್ಳಿ ಗೊಜ್ಜು ಟ್ರೈ ಮಾಡಿ. ಸಿಹಿ–ಖಾರ–ಹುಳಿ ರುಚಿಯ ಮಿಶ್ರಣದಿಂದ ಈ ಗೊಜ್ಜು ತಿಂಡಿಗೆ ಹೊಸ ರುಚಿ ಕೊಡುತ್ತೆ.
ಬೇಕಾಗುವ ಸಾಮಗ್ರಿಗಳು:
ದೊಡ್ಡ ಈರುಳ್ಳಿ – 3
ಟೊಮೇಟೊ – 1
ಹಸಿಮೆಣಸು – 2
ಕೆಂಪು ಮೆಣಸಿನ ಪುಡಿ – 1 ಟೀ ಸ್ಪೂನ್
ಹುಣಸೆ ಹಣ್ಣು ರಸ – 2 ಟೇಬಲ್ ಸ್ಪೂನ್
ಬೆಲ್ಲ – ಚಿಕ್ಕ ತುಂಡು
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – 2 ಟೇಬಲ್ ಸ್ಪೂನ್
ಒಗ್ಗರಣೆಗೆ: ಸಾಸಿವೆ, ಜೀರಿಗೆ, ಕರಿಬೇವು, ಒಣ ಮೆಣಸಿನಕಾಯಿ.
ಮಾಡುವ ವಿಧಾನ:
ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ ಒಗ್ಗರಣೆ ಹಾಕಿ. ಈರುಳ್ಳಿ ಮತ್ತು ಹಸಿಮೆಣಸು ಹಾಕಿ ಚೆನ್ನಾಗಿ ಕರಿಯಿರಿ.ಈಗ ಟೊಮೇಟೊ ಸೇರಿಸಿ ಮೃದುವಾಗುವವರೆಗೆ ಬೇಯಿಸಿ.
ಈಗ ಮೆಣಸಿನ ಪುಡಿ, ಉಪ್ಪು, ಹುಣಸೆ ರಸ ಮತ್ತು ಬೆಲ್ಲ ಸೇರಿಸಿ 5–7 ನಿಮಿಷ ಕುದಿಯಲು ಬಿಡಿ. ಎಣ್ಣೆ ಮೇಲಕ್ಕೆ ಬರುವಷ್ಟು ಗಟ್ಟಿಯಾಗಿದ್ರೆ ಸ್ಟೌವ್ ಆಫ್ ಮಾಡಿ.
ಬಿಸಿ ದೋಸೆ ಅಥವಾ ಚಪಾತಿಯ ಜೊತೆ ಈ ಈರುಳ್ಳಿ ಗೊಜ್ಜು ಸವಿದ್ರೆ ರುಚಿಯ ಮಜಾನೇ ಬೇರೆ!



