February 21, 2026
Saturday, February 21, 2026
spot_img

ಇಷ್ಟವಿಲ್ಲ ಅಂತ ಹೇಳಿದ್ರೂ ಹಾಗಲಕಾಯಿ ಪಲ್ಯ ಮಾಡಿದ್ದೇ ತಪ್ಪಾಯ್ತು! ಅಮ್ಮನನ್ನು ಕೊಂ*ದ ಮಗ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹಾಗಲಕಾಯಿ ಪಲ್ಯ ಮಾಡಬೇಡ ಎಂದು ಹೇಳಿದರೂ ಕೇಳದ ಅಡುಗೆ ಮಾಡಿದ ತಾಯಿಯನ್ನು ಮಗು ಕೊಂದು ಹಾಕಿದ್ದಾನೆ.

ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ತಾಯಿ ಮಗನ ನಡುವೆ ಉಂಟಾದ ಸಣ್ಣ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.

ಆರೋಪಿ ಜಗದೀಶ್‌ ತನ್ನ ತಾಯಿ ಸುಮಿತ್ರಾ ಪೆಟ್ಕುಲೆ ಅವರ ಮೇಲೆ ಕ್ರೂರವಾಗಿ ಹಲ್ಲೆ ಮಾಡಿದ್ದಾನೆ. ಇದರಿಂದ ತಾಯಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಜಗದೀಶ್‌ಗೆ ಕುಡಿಯುವ ಚಟ ಇತ್ತು. ಎರಡು ತಿಂಗಳ ಹಿಂದಷ್ಟೇ ಪತ್ನಿ ಕೂಡ ಅವರನ್ನು ಬಿಟ್ಟು ಹೋಗಿದ್ದರು. ಹೀಗಾಗಿ ಅಮ್ಮನ ಜೊತೆ ವಾಸವಿದ್ದರು. ಕೊಲೆಯ ರಾತ್ರಿ ಕುಡಿದುಕೊಂಡು ಬಂದಿದ್ದ ಜಗದೀಶ್‌ ಸಿಟ್ಟಿನಲ್ಲಿದ್ದ.

ಹಾಗಲಕಾಯಿ ಇಷ್ಟ ಇಲ್ಲ ಅಂದ್ರೂ ಅದನ್ನೇ ಮಾಡಿದಿರಿ ಎಂದು ಜಗಳ ಆಡಿದ್ದ. ಮಾತಿಗೆ ಮಾತು ಬೆಳೆದು ಜಗಳ ಆಗಿ ತಾಯಿಗೆ ಹೊಡೆದಿದ್ದ. ತಾಯಿ ಸತ್ತುಹೋಗಿದ್ದಾರೆ ಎಂದು ಅರಿವಿಗೆ ಬಂದ ನಂತರ ಜಗದೀಶ್‌ ಇಡೀ ಊರಿನಲ್ಲಿ ಓಡಾಡಿ ನಾನು ಅಮ್ಮನನ್ನು ಕೊಂದುಬಿಟ್ಟೆ ಎಂದು ಹೇಳಿದ್ದಾರೆ ಎನ್ನಲಾಗಿದೆ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !