ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್‌ನ ಸ್ಟಾರ್ ದಂಪತಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ತಮ್ಮ ಎರಡನೇ ಹೆಣ್ಣು ಮಗುವಿನ ಹೆಸರನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ. ಕಳೆದ ಸೆಪ್ಟೆಂಬರ್ 19 ರಂದು ಎರಡನೇ ಮಗಳಿಗೆ ಜನ್ಮ ನೀಡಿದ್ದ ಈ ಜೋಡಿ, ಇದೀಗ ವಿಜಯದಶಮಿಯ ದಿನದಂದು ತಮ್ಮ ಮಗುವಿಗೆ ‘ದೇವಿ ಪಡುಕೋಣೆ ಸಿಂಗ್’ ಎಂದು ಹೆಸರಿಟ್ಟಿರುವುದಾಗಿ ತಿಳಿಸಿದ್ದಾರೆ.
ಫ್ಯಾಮಿಲಿ ಪೋಟೋ ಹಂಚಿಕೊಂಡ ದಂಪತಿ
ದಸರಾ ಹಬ್ಬದ ಶುಭ ಸಂದರ್ಭದಲ್ಲಿ ದೀಪಿಕಾ ಮತ್ತು ರಣವೀರ್ ತಮ್ಮ ಇಡೀ ಕುಟುಂಬದ ಮೊದಲ ಝಲಕ್ ಅನ್ನು ಹಂಚಿಕೊಂಡಿದ್ದಾರೆ. ಸಾಂಪ್ರದಾಯಿಕ ಉಡುಗೆಯಲ್ಲಿ ಇಡೀ ಕುಟುಂಬ ಮಿಂಚಿದ್ದು, ಈ ಸುಂದರ ಫೋಟೋವನ್ನು ಪೋಸ್ಟ್ ಮಾಡಿರುವ ದಂಪತಿ, “ಪ್ರೀತಿ ಮತ್ತು ಸಮೃದ್ಧಿಯ ಸಂಕೇತ… ದೇವಿ ಪಡುಕೋಣೆ ಸಿಂಗ್” ಎಂದು ಬರೆದುಕೊಂಡು ದೃಷ್ಟಿ ತಗುಲದಿರಲಿ ಎಂದು ಇವಿಲ್-ಐ ಎಮೋಜಿಗಳನ್ನು ಹಾಕಿದ್ದಾರೆ.
ಇದನ್ನೂ ಓದಿ:
ತಂಗಿಗೆ ಮುತ್ತಿಟ್ಟ ಅಕ್ಕ ‘ದುವಾ’
ಈ ಅಪರೂಪದ ಪೋಟೋದಲ್ಲಿ ದೀಪಿಕಾ-ರಣವೀರ್ ಅವರ ಮೊದಲ ಮಗಳು ದುವಾ ತನ್ನ ಪುಟಾಣಿ ತಂಗಿ ದೇವಿಗೆ ಪ್ರೀತಿಯಿಂದ ಮುತ್ತಿಡುತ್ತಿರುವ ಕ್ಷಣ ಸೆರೆಯಾಗಿದೆ. ಸೆಪ್ಟೆಂಬರ್ 2024 ರಲ್ಲಿ ಜನಿಸಿದ್ದ ಮೊದಲ ಮಗಳು ದುವಾಳ ಆಗಮನದ ಬಳಿಕ, ಇದೀಗ ಮತ್ತೊಂದು ಹೆಣ್ಣು ಮಗುವಿನ ಹುಟ್ಟಿನಿಂದ ಇಡೀ ಕುಟುಂಬದಲ್ಲಿ ಹಬ್ಬದ ಸಂಭ್ರಮ ದುಪ್ಪಟ್ಟಾಗಿದೆ.



