February 22, 2026
Sunday, February 22, 2026
spot_img

ಫಾರ್ಮ್ ಚರ್ಚೆ ನಡುವೆಯೂ ಆಕ್ರಮಣಕಾರಿ ಆಟಕ್ಕೆ ಅಭಿಷೇಕ್ ರೆಡಿ! ಯಾವುದೇ ಕಾರಣಕ್ಕೂ ಬದಲಾಗಲ್ಲ ಎಂದಿದ್ಯಾಕೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟೀಮ್ ಇಂಡಿಯಾ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಅವರ ಫಾರ್ಮ್ ಕುರಿತು ಚರ್ಚೆ ಮುಂದುವರಿದಿದೆ. ಕೆಲ ಪಂದ್ಯಗಳಲ್ಲಿ ಸಿಡಿಲಬ್ಬರ ಪ್ರದರ್ಶನ ನೀಡಿದರೆ, ಇನ್ನೂ ಕೆಲವು ಸಂದರ್ಭಗಳಲ್ಲಿ ಶೂನ್ಯಕ್ಕೆ ಔಟಾಗಿರುವುದು ಅಭಿಮಾನಿಗಳಲ್ಲಿ ಗೊಂದಲ ಮೂಡಿಸಿದೆ. ಟಿ20 ವಿಶ್ವಕಪ್‌ಗೆ ಮುನ್ನ ಎರಡು ವೇಗದ ಅರ್ಧಶತಕ ಸಿಡಿಸಿದ ಅವರು, ಟೂರ್ನಿಯಲ್ಲಿ ಬ್ಯಾಕ್ ಟು ಬ್ಯಾಕ್ ಮೂರು ಬಾರಿ ಡಕ್‌ಗೆ ಔಟಾದದ್ದು ಬೇಸರ ತರಿಸಿದೆ.

ಆಕ್ರಮಣಕಾರಿ ಶೈಲಿಯೇ ತಮ್ಮ ಗುರುತು ಎಂದು ಹೇಳಿರುವ ಅಭಿಷೇಕ್, ಅದನ್ನು ಬದಲಾಯಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಖಾಸಗಿ ಚಾನೆಲ್ ಸಂದರ್ಶನದಲ್ಲಿ ಮಾತನಾಡಿದ ಅವರು, “ನಾನು ನನ್ನ ಆಟವನ್ನು ಆನಂದಿಸುತ್ತೇನೆ. ಫಲಿತಾಂಶ ಹೇಗೇ ಬಂದರೂ ಮನಸ್ಥಿತಿ ಬದಲಾಯಿಸುವುದಿಲ್ಲ” ಎಂದಿದ್ದಾರೆ.

ಇದನ್ನೂ ಓದಿ:

ಒತ್ತಡವನ್ನು ದೂರವಿಟ್ಟು ಕಳೆದ ಎರಡು ವರ್ಷಗಳಿಂದ ಸಿದ್ಧತೆ ಮತ್ತು ತರಬೇತಿಗೆ ಹೆಚ್ಚು ಒತ್ತು ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ. ರನ್‌ಗಳು ಕೆಲವೊಮ್ಮೆ ಬರುತ್ತವೆ, ಕೆಲವೊಮ್ಮೆ ಬರದೇ ಇರಬಹುದು. ಆದರೆ ತಮ್ಮ ಪ್ರಕ್ರಿಯೆಯ ಮೇಲೆ ನಂಬಿಕೆ ಇಟ್ಟುಕೊಂಡೇ ಮೈದಾನಕ್ಕಿಳಿಯುವುದಾಗಿ ಹೇಳಿದ್ದಾರೆ.

ಸೌತ್ ಆಫ್ರಿಕಾ ವಿರುದ್ಧದ ಸೂಪರ್-8 ಪಂದ್ಯದಲ್ಲೂ ಆರಂಭಿಕನಾಗಿ ಅವಕಾಶ ಸಿಗುವ ಸಾಧ್ಯತೆ ಇದ್ದು, ಮುಂದಿನ ಪಂದ್ಯಗಳಲ್ಲಿ ಕೂಡ ಅದೇ ಆಕ್ರಮಣಕಾರಿ ಧೋರಣಿಯನ್ನೇ ಮುಂದುವರಿಸುವುದಾಗಿ ಅಭಿಷೇಕ್ ಸಂದೇಶ ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !