February 22, 2026
Sunday, February 22, 2026
spot_img

ಮದುವೆ ಸಂಭ್ರಮದ ಮನೆಯಲ್ಲಿ ಶೋಕ: ಸಾವಿಗೆ ಶರಣಾದ ಸಹೋದರಿಯರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜಸ್ಥಾನದ ಜೋಧಾಪುರದಲ್ಲಿ ಅಕ್ಕ-ತಂಗಿಯರಿಬ್ಬರು ಮದುವೆಗೆ ಕೆಲವೇ ಗಂಟೆಗಳ ಮೊದಲು ಸಾವಿಗೆ ಶರಣಾದ ಘಟನೆ ನಡೆದಿದೆ.

ಮೃತರನ್ನು ಶೋಭಾ (25) ಮತ್ತು ವಿಮಲಾ (23) ಎಂದು ಗುರುತಿಸಲಾಗಿದೆ. ಇದರಿಂದ ಮದುವೆಯ ಸಂಭ್ರಮದಲ್ಲಿದ್ದ ಮನೆ ಈಗ ಶೋಕ ಸಾಗರದಲ್ಲಿ ಮುಳುಗಿದೆ.

ಫೆಬ್ರವರಿ 21ರಂದು ಸಹೋದರಿಯರ ಮದುವೆಗೆ ದಿನ ನಿಗದಿಪಡಿಸಲಾಗಿತ್ತು. ಫೆಬ್ರವರಿ 20ರ ಮಧ್ಯರಾತ್ರಿ ತನಕ ಮನೆಯಲ್ಲಿ ಮದುವೆ ಪೂರ್ವ ಶಾಸ್ತ್ರ ನೆರವೇರಿತ್ತು. ಅದಾದ ಬಳಿಕ ಇಬ್ಬರು ನಿದ್ದೆಗೆಂದು ರೂಮ್‌ಗೆ ತೆರಳಿ ಸಾವಿಗೆ ಶರಣಾಗಿದ್ದಾರೆ. ಮುಂಜಾನೆ ಮನೆಯವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸಲಾಯಿತು. ಇಬ್ಬರೂ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ

ಪೊಲೀಸರು ಸ್ಥಳಕ್ಕೆ ಧಾವಿಸಿದಾಗ ಮನೆಯವರು ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಸುತ್ತಿದ್ದರು. ಈ ವೇಳೆ ಪೊಲೀಸರು ಅಂತ್ಯಕ್ರಿಯೆಯ ವ್ಯವಸ್ಥೆಗಳನ್ನು ಸ್ಥಗಿತಗೊಳಿಸಿದರು. ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಶವಾಗಾರಕ್ಕೆ ಕಳುಹಿಸಲಾಯಿತು ಮತ್ತು ನಂತರ ಕುಟುಂಬಕ್ಕೆ ಹಿಂತಿರುಗಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ ಸಹೋದರಿಯರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದಾಗ್ಯೂ ಸಾವಿಗೆ ನಿಜವಾದ ಕಾರಣ ಪೋಸ್ಟ್‌ ಮಾರ್ಟಂ ವರದಿ ಕೈ ಸೇರಿದ ಬಳಿಕವಷ್ಟೇ ಗೊತ್ತಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !