February 24, 2026
Tuesday, February 24, 2026
spot_img

ದಿನಭವಿಷ್ಯ: ಹೊಸ ವ್ಯವಹಾರಕ್ಕೆ ಕೈ ಹಾಕಬೇಕು ಎಂದುಕೊಂಡಿದ್ದೀರ? ಇಂದು ನೀವು ಮುಟ್ಟಿದ್ದೆಲ್ಲಾ ಚಿನ್ನ

ಮೇಷ
ನಿಮ್ಮ ಸುತ್ತಲಿನ ಕೆಲವರ ವರ್ತನೆಯಲ್ಲಿ ಬದಲಾವಣೆ ಕಂಡೀತು. ಅದು ನಿಮಗೆ ಪೂರಕವೋ ವಿರೋಧಿಯೋ ಎಂದು ವಿಮರ್ಶಿಸಿ ನೋಡಿ.
ವೃಷಭ
ವೃತ್ತಿಯಲ್ಲಿ ಮತ್ತು ಪ್ರೀತಿಯಲ್ಲಿ ಮಹತ್ವದ ಬೆಳವಣಿಗೆ. ಸರಿಯಾದ ನಡೆ ಪ್ರಯೋಗಿಸಿದಲ್ಲಿ   ನಿಮಗೆ ಮೇಲುಗೈ ನಿಶ್ಚಿತ. ಇಂದು ವೆಚ್ಚ ಅಧಿಕ.
ಮಿಥುನ
ಅಸ್ಥಿರತೆ ನಿವಾರಣೆ. ಸ್ಥಿರ ಬದುಕಿನ ಸಂಕೇತ ತೋರುತ್ತಿವೆ. ಹೆಚ್ಚು ವಾಗ್ವಾದಕ್ಕೆ ಇಳಿಯದಿರಿ. ಅದು ಸಮಸ್ಯೆಯನ್ನು ಹೆಚ್ಚಿಸಬಹುದಷ್ಟೆ.
ಕಟಕ
ನಿಮ್ಮ ಪ್ರಯತ್ನ ಸರಿಯಾದ ದಿಕ್ಕಿನಲ್ಲಿ ಸಾಗುವುದು. ಅದರ ಫಲ ಸಿಕ್ಕೇ ಸಿಗಲಿದೆ. ನಿಮ್ಮ ವಿರೋಧಗಳನ್ನು ಸಂಧಾನದಿಂದ ಮಣಿಸಿರಿ.  
ಸಿಂಹ
ಆತ್ಮೀಯರೇ ಇಂದು ನಿಮ್ಮನ್ನು ಟೀಕಿಸಬಹುದು. ಅವರನ್ನು ದೂರದಿರಿ. ನಿಮ್ಮ ವರ್ತನೆಯಲ್ಲಿ ಬದಲಾವಣೆ ತನ್ನಿ. ಸ್ನೇಹಿತರ ಜತೆ ಕಾಲಕ್ಷೇಪ.  
ಕನ್ಯಾ
ಹೊಸ ವ್ಯವಹಾರ ಆರಂಭಕ್ಕೆ ಸುದಿನ. ಸಂಘಟಿತ ಪ್ರಯತ್ನದಿಂದ ಯಶಸ್ಸು. ಶೇರು ಹೂಡಿಕೆಯಿಂದ ಲಾಭ. ಕೌಟುಂಬಿಕ ಸಮಾಧಾನ.      
ತುಲಾ
ಕೆಲವರು ನಿಮ್ಮಿಂದ ಅತಿಯಾದುದನ್ನು ಅಪೇಕ್ಷಿಸುವರು. ಅವರ ಬೇಡಿಕೆ ಈಡೇರಿಸಲು ಕಷ್ಟಪಡುವಿರಿ. ಖರ್ಚಿನ ಮೇಲೆ ನಿಯಂತ್ರಣವಿಡಿ.
ವೃಶ್ಚಿಕ
ನಿಮಗೆ ಒದಗಿರುವ ಅಡ್ಡಿಗಳನ್ನು ಸಮರ್ಥವಾಗಿ ನಿವಾರಿಸುವಿರಿ. ನೀವು ಅಪೇಕ್ಷಿಸಿದ ವಿಷಯದಲ್ಲಿ ಉನ್ನತಿ. ಆಹಾರದಲ್ಲಿ ಹಿತಮಿತ ಸಾಽಸಿರಿ.    
ಧನು
ಸಾಮಾಜಿಕ ಕಾರ್ಯದಲ್ಲಿ ಪಾಲ್ಗೊಳ್ಳುವ ಅವಕಾಶ. ಹೆಚ್ಚುವರಿ ಹೊಣೆ ಬಿದ್ದರೆ ಅದನ್ನು ತಪ್ಪಿಸಿಕೊಳ್ಳಬೇಡಿ. ಅದು ಉನ್ನತಿಗೆ ದಾರಿಯಾಗಲಿದೆ.  
ಮಕರ
ಕೆಲ ವಿಷಯಗಳನ್ನು ಲಘುವಾಗಿ ಪರಿಗಣಿಸದಿರಿ. ಅದು ಗಂಭೀರ ಪರಿಣಾಮ ಉಂಟು ಮಾಡೀತು.ದೈಹಿಕ ಕ್ಷಮತೆ ಕಾಯ್ದುಕೊಳ್ಳಲು ಗಮನ ಕೊಡಿ.
ಕುಂಭ
ಖಾಸಗಿ ಸಮಸ್ಯೆ ಕಿರಿಕಿರಿ ಸೃಷ್ಟಿಸಲಿದೆ. ಸಣ್ಣ ವಿಷಯದಲ್ಲೂ ಲೋಪ ಕಂಡುಹಿಡಿಯಬೇಡಿ.   ಹೊಂದಾಣಿಕೆಯ ಸ್ವಭಾವ ಬೆಳೆಸಿಕೊಳ್ಳಿ.
 ಮೀನ
ನಿಮ್ಮ ಕಾರ್ಯದಲ್ಲಿ ಪ್ರಗತಿ. ಸಹನೆಯಿಂದ ಜನರನ್ನು ಗೆಲ್ಲಿ. ಭಾವಾವೇಶದ ಪ್ರತಿಕ್ರಿಯೆ ಬೇಡ. ಹಣದ ವಿಚಾರ ಎಚ್ಚರದಿಂದ ನಿಭಾಯಿಸಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !