October 7, 2026
Wednesday, October 7, 2026
spot_img

‘ನೀವು ಎಷ್ಟೇ ಕೇಸ್ ಹಾಕಿದ್ರೂ ಹೆದರಲ್ಲ’: ಜಂತರ್ ಮಂತರ್‌ನತ್ತ ಮುನ್ನುಗ್ಗಿದ ಖರ್ಗೆ-ರಾಹುಲ್ ಪಡೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ ಪ್ರತಿಪಕ್ಷಗಳ ‘ಇಂಡಿಯಾ’ ಒಕ್ಕೂಟ ತನ್ನ ಹೋರಾಟದ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ಪ್ರಮುಖ ವಿರೋಧ ಪಕ್ಷದ ನಾಯಕರನ್ನು ಹೊತ್ತ ಬಸ್‌ಗಳು ದೆಹಲಿಯ ಜಂತರ್ ಮಂತರ್ ಪ್ರತಿಭಟನಾ ಸ್ಥಳದತ್ತ ಸಾಗಿದೆ.

ಬಸ್‌ಗಳಲ್ಲಿ ಜಂತರ್ ಮಂತರ್‌ನತ್ತ ನಾಯಕರು

ಮಂಗಳವಾರ ನಡೆದ ಹೈಡ್ರಾಮಾದ ನಂತರ, ಇಂದು ವಿರೋಧ ಪಕ್ಷಗಳ ಸಂಸದರು ಒಗ್ಗಟ್ಟಾಗಿ ಜಂತರ್ ಮಂತರ್‌ನಲ್ಲಿ ಬೃಹತ್ ಧರಣಿ ನಡೆಸಲು ನಿರ್ಧರಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ನಿವಾಸದಲ್ಲಿ ನಡೆದ ಮಹತ್ವದ ಸಭೆಯ ಬಳಿಕ, ರಾಹುಲ್ ಗಾಂಧಿ, ಖರ್ಗೆ ಹಾಗೂ ‘ಇಂಡಿಯಾ’ ಒಕ್ಕೂಟದ ಸಂಸದರೆಲ್ಲರೂ ಒಟ್ಟಾಗಿ ವಿಶೇಷ ಬಸ್‌ಗಳ ಮೂಲಕ ಪ್ರತಿಭಟನಾ ಸ್ಥಳಕ್ಕೆ ತೆರಳುತ್ತಿದ್ದಾರೆ.

ಇದನ್ನೂ ಓದಿ:

ಎಫ್‌ಐಆರ್‌ಗಳಿಗೆ ಹೆದರುವವರಲ್ಲ ನಾವು

ಇದಕ್ಕೂ ಮುನ್ನ ಎಕ್ಸ್ ಖಾತೆಯಲ್ಲಿ ರಾಹುಲ್ ಗಾಂಧಿ ಅವರೊಂದಿಗಿನ ಫೋಟೋ ಹಂಚಿಕೊಳ್ಳುವ ಮೂಲಕ ತಿರುಗೇಟು ನೀಡಿರುವ ಖರ್ಗೆ, ʼನೀವು ನಮ್ಮ ಮೇಲೆ ಎಷ್ಟೇ ಕೇಸ್‌ಗಳನ್ನು ಹಾಕಿದರೂ, ನಮ್ಮನ್ನು ಹೆದರಿಸಲು ಎಷ್ಟೇ ಪ್ರಯತ್ನಿಸಿದರೂ ನಾವು ಹೆದರುವವರಲ್ಲ. ನಾವು ನಗುತ್ತಲೇ ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆʼ ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

 ಬಿಗಿ ಭದ್ರತೆ

ಪ್ರತಿಪಕ್ಷಗಳ ಈ ಬೃಹತ್ ಪ್ರತಿಭಟನೆ ಹಿನ್ನೆಲೆಯಲ್ಲಿ ಜಂತರ್ ಮಂತರ್ ಸುತ್ತಮುತ್ತ ದೆಹಲಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಅಳವಡಿಸಿ ಕಟ್ಟುನಿಟ್ಟಿನ ಭದ್ರತೆಯನ್ನು ಕೈಗೊಂಡಿದ್ದಾರೆ.

Must Read