ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿ20 ವಿಶ್ವಕಪ್‌ನ ಲೀಗ್ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಸೋತಿದ್ದ ಶ್ರೀಲಂಕಾ ಮತ್ತೆ ಎಡವಿದ್ದು, ಇಂಗ್ಲೆಂಡ್ ವಿರುದ್ಧ ಹೀನಾಯ ಸೋಲಿಗೆ ತುತ್ತಾಗಿದೆ.
ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ಫಿಲ್ ಸಾಲ್ಟ್ ಅರ್ಧಶತಕದ ಹೊರೆತಾಗಿಯೂ ಕೇವಲ 146 ರನ್ಗಳಿಸಿತ್ತು. ಆದರೆ 147 ರನ್ಗಳ ಸಾಧಾರಣ ಗುರಿಯನ್ನ ಬೆನ್ನಟ್ಟಿದ ಶ್ರೀಲಂಕಾ ತಂಡ ಸಂಪೂರ್ಣ ಬ್ಯಾಟಿಂಗ್ ವೈಫಲ್ಯ ಅನುಭಿಸಿ ಕೇವಲ 95ಕ್ಕೆ ಆಲೌಟ್ ಆಯಿತು.
ಸ್ಪಿನ್ ಬೌಲಿಂಗ್ ಮೂಲಕ ಇಂಗ್ಲೆಂಡ್ ತಂಡವನ್ನ 146ಕ್ಕೆ ನಿಯಂತ್ರಿಸಲು ಯಶಸ್ವಿಯಾದ ಅತಿಥೇಯ ತಂಡ ಅದೇ ಸ್ಪಿನ್ ಬೌಲಿಂಗ್ ವಿರುದ್ಧ ರನ್ಗಳಿಸಲು ಪರದಾಡಿ 100 ರನ್ಗಳ ಗಡಿಯನ್ನೇ ದಾಟಲಾಗದೇ ಹೀನಾಯ ಸೋಲು ಕಂಡಿತು. ಈ ಸೋಲು ಅವರ ಸೆಮಿಫೈನಲ್ ಕನಸನ್ನ ಕ್ಷೀಣಿಸಿದೆ.
147 ರನ್ಗಳ ಗುರಿಯನ್ನ ಬೆನ್ನಟ್ಟಿದ ಶ್ರೀಲಂಕಾ ತಂಡ ಪವರ್ ಪ್ಲೇನಲ್ಲೇ 5 ವಿಕೆಟ್ ಕಳೆದುಕೊಂಡಿತು. ಟೂರ್ನಮೆಂಟ್ನಲ್ಲಿ ಚೊಚ್ಚಲ ಶತಕ ಸಿಡಿಸಿದ್ದ ಪಾತುಮ್ ನಿಸ್ಸಾಂಕ 8 ಎಸೆತಗಳಲ್ಲಿ 9 ರನ್ಗಳಿಸಿ ಆರ್ಚರ್ ಬೌಲಿಂಗ್ನಲ್ಲಿ ಓವರ್ಟರ್ನ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.ಕುಸಾಲ್ ಮೆಂಡಿಸ್ (4 ಎಸೆತಗಳಲ್ಲಿ 4 ರನ್) ಹಾಗೂ 4ನೇ ಕ್ರಮಾಂಕದಲ್ಲಿ ಬಂದಿದ್ದ ಪವನ್ ರತ್ನಾಯಕೆ (0) ಯನ್ನ ಬ್ಯಾಕ್ ಟು ಬ್ಯಾಕ್ ಎಸೆತಗಳಲ್ಲಿ ಪೆವಿಲಿಯನ್ ಸೇರಿಸಿದರು. ಮತ್ತೊಬ್ಬ ಆರಂಭಿಕ ಬ್ಯಾಟರ್ ಕಮಿಲ್ ಮಿಶಾರಾರನ್ನ ಔಟ್ ಮಾಡಿದರು. ಮಿಶಾರಾ ಕೂಡ ಓವರ್ಟನ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.



