June 26, 2026
Friday, June 26, 2026
spot_img

BIG NEWS | ಡೊನಾಲ್ಡ್‌ ಟ್ರಂಪ್ ಹತ್ಯೆಗೆ ನಡೆಯಿತೇ ಸ್ಕೆಚ್? ರೆಸಾರ್ಟ್‌ಗೆ ನುಗ್ಗಿದ್ದ ಯುವಕನ ಮೇಲೆ ಗುಂಡಿನ ದಾಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕದ ಫ್ಲೋರಿಡಾದ ವೆಸ್ಟ್ ಪಾಮ್ ಬೀಚ್‌ನಲ್ಲಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾರ್-ಎ-ಲಾಗೊ ರೆಸಾರ್ಟ್‌ಗೆ ಅಕ್ರಮವಾಗಿ ಪ್ರವೇಶಿಸಿದ ಶಸ್ತ್ರಸಜ್ಜಿತ ಯುವಕನನ್ನು ರಹಸ್ಯ ಏಜೆಂಟ್‌ ಸಿಬ್ಬಂದಿ ಗುಂಡಿಕ್ಕಿ ಕೊಂದಿದ್ದಾರೆ.

ಯುವಕ ನುಗ್ಗಿದ ಸಮಯದಲ್ಲಿ ಟ್ರಂಪ್‌ ರಾಜಧಾನಿ ವಾಷಿಂಗ್ಟನ್‌ನಲ್ಲಿದ್ದರು.

ಈ ಕುರಿತು ಅಮೆರಿಕ ಸೀಕ್ರೆಟ್ ಸರ್ವೀಸ್ ವಕ್ತಾರ ಆಂಟೋನಿ ಗುಗ್ಲಿಯೆಲ್ಮಿ ಮಾಹಿತಿ ನೀಡಿದ್ದು, ಮುಂಜಾನೆ ಮಾರ್-ಎ-ಲಾಗೊದಲ್ಲಿರುವ ಎಸ್ಟೇಟ್‌ ಆವರಣದೊಳಗೆ ಅಕ್ರಮವಾಗಿ ಪ್ರವೇಶಿಸಿದ ಶಸ್ತ್ರ ಸಜ್ಜಿತ 20 ವರ್ಷದ ಯುವಕನನ್ನು ಅಮೆರಿಕ ಸೀಕ್ರೆಟ್ ಸರ್ವೀಸ್ ಏಜೆಂಟ್‌ ಸಿಬ್ಬಂದಿ ಗುಂಡಿಕ್ಕಿ ಕೊಂದಿದ್ದಾರೆ.

ಆತ ವೆಸ್ಟ್‌ ಪಾಮ್‌ ಬೀಚ್‌ ಎಸ್ಟೇಟ್‌ನ ಉತ್ತರ ದ್ವಾರವನ್ನು ಸಮೀಪಿಸಿದ ವೇಳೆ ಆತನ ಬಳಿ ಶಾಟ್‌ಗನ್‌ ಮತ್ತು ಫ್ಯೂಲ್‌ ಕ್ಯಾನ್‌ನಂತೆ ಕಾಣುವ ವಸ್ತು ಇತ್ತು ಎನ್ನಲಾಗಿದೆ. ಘಟನೆಯಲ್ಲಿ ಯಾವುದೇ ಭದ್ರತಾ ಸಿಬ್ಬಂದಿಗೆ ಗಾಯವಾಗಿಲ್ಲ. ಎಫ್‌ಬಿಐ, ಸೀಕ್ರೆಟ್‌ ಸರ್ವೀಸ್ ಮತ್ತು ಪಾಮ್‌ ಬೀಚ್‌ ಕೌಂಟಿ ಶೆರಿಫ್‌ ಕಚೇರಿ ದಾಳಿಯ ತನಿಖೆ ಕೈಗೆತ್ತಿಕೊಂಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !