February 23, 2026
Monday, February 23, 2026
spot_img

ಮಾಜಿ ರೈಲ್ವೆ ಸಚಿವ, ತೃಣಮೂಲ ಕಾಂಗ್ರೆಸ್‌ನ ಎರಡನೇ ಕಮಾಂಡರ್‌ ಆಗಿದ್ದ ಮುಕುಲ್‌ ರಾಯ್‌ ನಿಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕೋಲ್ಕತ್ತಾದ ಮಾಜಿ ರೈಲ್ವೆ ಸಚಿವ, ತೃಣಮೂಲ ಕಾಂಗ್ರೆಸ್‌ನ ಎರಡನೇ ಕಮಾಂಡರ್‌ ಆಗಿದ್ದ ಮುಕುಲ್‌ ರಾಯ್‌ ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮೂತ್ರಪಿಂಡದ ತೊಂದರೆ ಹಾಗೂ ಇನ್ನಿತರ ವಯೋಸಹಜ ದೈಹಿಕ ತೊಂದರೆಗಳಿಂದ ರಾಯ್‌ ಅವರು ಬಳಲುತ್ತಿದ್ದರು. 71 ವಯಸ್ಸಿನ ರಾಯ್‌ ಅವರನ್ನು ತಡರಾತ್ರಿ ಕೊಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಮಧ್ಯಾಹ್ನ 1:30 ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.

ನಿನ್ನೆ ರಾತ್ರಿ ಸುಮಾರು 1:30 ರ ಸುಮಾರಿಗೆ ಅವರಿಗೆ ತೀವ್ರ ಹೃದಯಾಘಾತವಾಯಿತು. ವೈದ್ಯರ ಪ್ರಯತ್ನಗಳ ಹೊರತಾಗಿಯೂ ಅವರು ಬದುಕುಳಿಯಲು ಸಾಧ್ಯವಾಗಲಿಲ್ಲ ಎಂದು ಅವರ ಮಗ ಸುಭ್ರಾಂಗ್ಶು ರಾಯ್ ತಿಳಿಸಿದ್ದಾರೆ.

ರಾಯ್ ಅವರು ತೃಣಮೂಲ ಕಾಂಗ್ರೆಸ್ ಪಕ್ಷದ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದರು. ಒಂದು ಕಾಲದಲ್ಲಿ ‘ಬಂಗಾಳ ರಾಜಕೀಯದ ಚಾಣಕ್ಯ’ ಆಗಿದ್ದರು. ಮಮತಾ ಬ್ಯಾನರ್ಜಿ ಅವರ ಆಪ್ತರಾಗಿದ್ದ ಅವರು ವೈಯಕ್ತಿಕ ಮತ್ತು ರಾಜಕೀಯ ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !