September 27, 2026
Sunday, September 27, 2026
spot_img

ಶಿವಾಜಿ ಜಯಂತಿ ವೇಳೆ ಕಲ್ಲು ತೂರಾಟ: ಫೆ.26ಕ್ಕೆ ಬೃಹತ್‌ ಹೋರಾಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಾಗಲಕೋಟೆಯಲ್ಲಿ ಶಿವಾಜಿ ಜಯಂತಿ ಮೆರವಣಿಗೆ ವೇಳೆ ನಡೆದ ಕಲ್ಲುತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಸಮುದಾಯ ಹೋರಾಟಕ್ಕೆ ಮುಂದಾಗಿದೆ.

ಬಾಗಲಕೋಟೆಯಲ್ಲಿ ಫೆ.26 ರಂದು ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಹಿಂದೂ ಸಕಲ ಸಮಾಜದ ಮುಖಂಡರು ಮತ್ತು ರಾಜಕೀಯ ನಾಯಕರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಅಪರಾಧಿಗಳನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಲಾಯಿತು. ಆರೋಪಿಗಳನ್ನು ಬಂಧಿಸದಿದ್ದರೆ, ಇದೇ ಫೆಬ್ರವರಿ 26 ರಂದು ಅಂಬಾಬಾಯಿ ದೇವಸ್ಥಾನದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸುವುದಾಗಿ ಘೋಷಿಸಲಾಗಿದೆ.

ಫೆಬ್ರವರಿ 26 ರಂದು ಬೆಳಗ್ಗೆ 10,30 ಗಂಟೆಗೆ ಅಂಬಾಬಾಯಿ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ಹೊರಡಲಿದೆ. ಈ ಹೋರಾಟದ ಮೂಲಕ ಆರೋಪಿಗಳ ಬಂಧನಕ್ಕೆ ಒತ್ತಾಯಿಸಲು ಹಿಂದೂ ಸಮುದಾಯ ಮುಂದಾಗಿದೆ.

Must Read