September 25, 2026
Friday, September 25, 2026
spot_img

FOOD | ಆಲೂಗೆಡ್ಡೆ ಜೀರಿಗೆ ಬಳಸಿ ಮಾಡಿ ಸಿಂಪಲ್ ಆಲೂ ಜೀರಾ ಫ್ರೈ

ಆಲೂ ಜೀರಾ ಫ್ರೈ ಅನ್ನ, ಚಪಾತಿ, ಪೂರಿ ಎಲ್ಲಕ್ಕೂ ಸೂಪರ್ ಕಾಂಬಿನೇಷನ್ ಆಗುವ ಸಿಂಪಲ್ ಡಿಶ್. ಕಡಿಮೆ ಪದಾರ್ಥಗಳಲ್ಲಿ, ಕಡಿಮೆ ಸಮಯದಲ್ಲಿ ತಯಾರಾಗುವ ಈ ಡ್ರೈ ರೆಸಿಪಿ ಎಲ್ಲರಿಗೂ ಇಷ್ಟವಾಗುತ್ತದೆ.

ಬೇಕಾಗುವ ಪದಾರ್ಥಗಳು:

ಆಲೂಗಡ್ಡೆ – 3
ಜೀರಿಗೆ – 1 ಟೀ ಸ್ಪೂನ್
ಎಣ್ಣೆ – 2 ಟೇಬಲ್ ಸ್ಪೂನ್
ಅರಿಶಿನ – ಅರ್ಧ ಟೀ ಸ್ಪೂನ್
ಕೆಂಪು ಮೆಣಸಿನ ಪುಡಿ – 1 ಟೀ ಸ್ಪೂನ್
ಧನಿಯಾ ಪುಡಿ – ಅರ್ಧ ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು – ಸ್ವಲ್ಪ

ಮಾಡುವ ವಿಧಾನ:

ಮೊದಲು ಆಲೂಗಡ್ಡೆಯ ಸಿಪ್ಪೆ ತೆಗೆದು ಬೇಯಿಸಿ ಚಿಕ್ಕ ತುಂಡುಗಳಾಗಿ ಕತ್ತರಿಸಿಕೊಳ್ಳಿ.

ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿ ಆದ ಮೇಲೆ ಜೀರಿಗೆ ಹಾಕಿ. ನಂತರ ಅರಿಶಿನ ಸೇರಿಸಿ ತಕ್ಷಣವೇ ಆಲೂ ತುಂಡುಗಳನ್ನು ಹಾಕಿ ಚೆನ್ನಾಗಿ ಕಲಸಿ.

ಈಗ ಉಪ್ಪು, ಮೆಣಸಿನ ಪುಡಿ, ಧನಿಯಾ ಪುಡಿ ಹಾಕಿ ನಿಧಾನವಾದ ಉರಿಯಲ್ಲಿ ಫ್ರೈ ಮಾಡಿ. ಮಧ್ಯೆ ಮಧ್ಯೆ ಕಲಸುತ್ತಾ ಸ್ವಲ್ಪ ಕ್ರಿಸ್ಪಿ ಆಗುವವರೆಗೆ ಫ್ರೈ ಮಾಡಿ.

ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿಕರವಾದ ಆಲೂ ಜೀರಾ ಫ್ರೈ ಸಿದ್ಧ.

Must Read