June 3, 2026
Wednesday, June 3, 2026
spot_img

ನಿಮ್ಮ ನಿಜವಾದ ಸ್ನೇಹಿತರು ಭ್ರಷ್ಟರು, ರಾಜಕೀಯ ಅವಕಾಶವಾದಿಗಳು: ಸ್ಟಾಲಿನ್ ವಿರುದ್ಧ ವಿಜಯ್ ವಾಗ್ದಾಳಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಡಿಎಂಕೆ ಅಧ್ಯಕ್ಷರ ನಿಜವಾದ ಸ್ನೇಹಿತರು ಭ್ರಷ್ಟರಾಗಿದ್ದು, ರಾಜಕೀಯ ಲಾಭದ ಮೇಲೆ ಕಣ್ಣಿಟ್ಟಿದ್ದಾರೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ವಿರುದ್ಧ ಸೋಮವಾರ ಟಿವಿಕೆ ಸಂಸ್ಥಾಪಕ, ನಟ ವಿಜಯ್ ವಾಗ್ದಾಳಿ ನಡೆಸಿದ್ದಾರೆ.

ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ವಿಜಯ್, ಮುಖ್ಯಮಂತ್ರಿಯವರೇ ನಿಮ್ಮ ಸಂಪತ್ತಿನ ಮೂಲ ಯಾವುದು? ಕಠಿಣ ಪರಿಶ್ರಮದಿಂದ ಗಳಿಸಿದ್ದಾ ಅಥವಾ ಅಧಿಕಾರ ವಹಿಸಿಕೊಂಡ ನಂತರ ಗಳಿಸಿದ್ದಾ ಎಂದು ಪ್ರಶ್ನಿಸಿದರು.

ಸ್ಟಾಲಿನ್ ಅವರು ರಾಜಕೀಯಕ್ಕೆ ಪ್ರವೇಶಿಸುವ ಮೊದಲು ತಾವು ಹೊಂದಿದ್ದ ಆಸ್ತಿಗಳನ್ನು ಮತ್ತು ಈಗ ಅವರು ಹೊಂದಿರುವ ಆಸ್ತಿಯನ್ನು ಸಾರ್ವಜನಿಕವಾಗಿ ಘೋಷಿಸಬೇಕುಎಂದು ಆಗ್ರಹಿಸಿದರು.

ಡಿಎಂಕೆ ಸರಕಾರ ತಮ್ಮ ಅಧಿಕಾರಾವಧಿಯಲ್ಲಿ ರಾಜ್ಯ ಎರಡಂಕಿಯ ಆರ್ಥಿಕಬೆಳವಣಿಗೆ ಸಾಧಿಸಿದೆ ಎಂದು ಹೇಳುತ್ತಿರುತ್ತಾರೆ ಆದರೆ ಸ್ಟಾಲಿನ್ ಅವರ ನಿಜವಾದ ಸ್ನೇಹಿತರು ಭ್ರಷ್ಟರಾಗಿದ್ದು, ರಾಜಕೀಯ ಅವಕಾಶವಾದಿಗಳು ಟೀಕಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !