ಮೇಷ
ಸಕಾಲದಲ್ಲಿ ಕಾರ್ಯಸಿದ್ಧಿ. ನಿಮ್ಮ ವರ್ತನೆ ಕೆಲವರ ಮನದಲ್ಲಿ ಸಂತೋಷ ಉಕ್ಕಿಸಲಿದೆ. ಆರ್ಥಿಕ ಸಫಲತೆ. ಒಟ್ಟಿನಲ್ಲಿ ಉಲ್ಲಾಸದ ದಿನ.
ವೃಷಭ
ಸಮಸ್ಯೆಗಳನ್ನು ಅಡಿಗೆ ಹಾಕಿ ನಿಮ್ಮ ಕೆಲಸ ಮಾಡಿ. ಇಂದು ಆ ಬಗ್ಗೆ ಚಿಂತಿಸಲು ಹೋಗಬೇಡಿ. ಇತರ ಪ್ರಮುಖ ಕಾರ್ಯ ನಿಮ್ಮನ್ನು ಕಾದಿದೆ.
ಮಿಥುನ
ನಿಮಗೆ ಪೂರಕ ಪರಿಸರದಲ್ಲಿ ಇಂದು ಕಾರ್ಯಾಚರಿಸುವಿರಿ. ಸಮಸ್ಯೆ ಕಾಡದು. ಕೌಟುಂಬಿಕ ಸಾಮರಸ್ಯ. ಆರ್ಥಿಕ ಸ್ಥಿರತೆ.
ಕಟಕ
ಆತ್ಮವಿಶ್ವಾಸದ ಕೊರತೆ ಇಂದು ಕಾಡುವುದು. ಹಾಗಾಗಿ ಕಾರ್ಯ ವಿಳಂಬ. ಸಾಂಸಾರಿಕ ಸಮಸ್ಯೆ ನಿವಾರಣೆ. ಇದರಿಂದ ಮನಸ್ಸಿಗೆ ನಿರಾಳತೆ.
ಸಿಂಹ
ವೃತ್ತಿಯಲ್ಲಿ ನಿರೀಕ್ಷಿತ ಗುರಿ ಸಾಧನೆ. ಉತ್ಸಾಹದ ಪರಿಸರ. ಆರ್ಥಿಕ ಪರಿಸ್ಥಿತಿ ಮೇಲೆ ಸಂಪೂರ್ಣ ಹಿಡಿತ ಸಾಽಸುವಿರಿ. ಸ್ವಾಸ್ಥ್ಯ ಸಮಸ್ಯೆ ಪರಿಹಾರ.
ಕನ್ಯಾ
ಕೆಟ್ಟ ಚಟಗಳನ್ನು ಬಿಟ್ಟುಬಿಡಿ. ಆರೋಗ್ಯಕ್ಕೆ ಆದ್ಯತೆ ಕೊಡಿ. ಕೆಲಸದಲ್ಲಿ ಹಿನ್ನಡೆಯಾದರೆ ಧೃತಿಗೆಡದಿರಿ. ಮರಳಿ ಯತ್ನವ ಮಾಡಿ.
ತುಲಾ
ಪ್ರೀತಿಯಲ್ಲಿ ಯಶ. ಹಿಡಿದ ಕಾರ್ಯದಲ್ಲಿ ಸ-ಲತೆ. ಅನಿರೀಕ್ಷಿತ ವಲಯದಿಂದ ಬೆಂಬಲ. ಆರ್ಥಿಕ ಒತ್ತಡ ಪರಿಹಾರ. ಆಹಾರ ಪಥ್ಯ ಅನುಸರಿಸಿ.
ವೃಶ್ಚಿಕ
ನಿಮ್ಮ ನಾಯಕತ್ವ ಗುಣ ಪ್ರದರ್ಶಿಸಿ. ಹಿಂಜರಿಕೆ ಬೇಡ. ಆಶಾವಾದ ಹೆಚ್ಚಿಸುವ ಬೆಳವಣಿಗೆ. ಪ್ರೀತಿಯ ಆಕರ್ಷಣೆ ಉಂಟಾದೀತು.
ಧನು
ಇಂದು ನಿಮ್ಮ ಕಾರ್ಯದಲ್ಲಿ ಅದೃಷ್ಟ ಕೈಕೊಡಬಹುದು. ನಿರಾಶೆ ಪಡದಿರಿ. ಯಾರದೋ ಮುಲಾಜಿಗೆ ಒಳಗಾಗಿ ಒಲ್ಲದ ಕೆಲಸ ಮಾಡದಿರಿ.
ಮಕರ
ವೃತ್ತಿ ಗುರಿ ತಲುಪಲು ಆದ್ಯತೆ ಕೊಡಿ. ಇನ್ನಿತರ ವಿಷಯಗಳತ್ತ ಗಮನ ಹರಿಸದಿರಿ. ವಾಗ್ವಾದವೊಂದು ಮನಸ್ಸು ಕೆಡಿಸಬಹುದು.
ಕುಂಭ
ಒತ್ತಡರಹಿತವಾಗಿ ಕೆಲಸ ಮಾಡಿ. ಇಲ್ಲವಾದರೆ ಕಾರ್ಯ ಕೆಟ್ಟೀತು. ಆರ್ಥಿಕ ಲಾಭ. ಆದರೆ ಖರ್ಚು ನಿಯಂತ್ರಿಸಿ. ಬಂಧುಗಳ ಅಸಹಕಾರ.
ಮೀನ
ನಿಮ್ಮ ನಿಸ್ವಾರ್ಥ ವರ್ತನೆ ಮೆಚ್ಚುಗೆಗೆ ಪಾತ್ರ. ಭಾವುಕ ಸನ್ನಿವೇಶ ಎದುರಿಸುವಿರಿ. ಸಂಗಾತಿ ಜತೆ ಸಹನೆಯಿಂದ ವರ್ತಿಸಿ. ಧನಲಾಭ.



