February 24, 2026
Tuesday, February 24, 2026
spot_img

ಛತ್ತೀಸ್‌ಗಢದ ಅಂಬಿಕಾಪುರದಲ್ಲಿ 40 ಜನರಿಗೆ ಜಾಂಡೀಸ್: ಪೈಪ್​ಲೈನ್​ ಸೋರಿಕೆ ಶಂಕೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಛತ್ತೀಸ್‌ಗಢದ ಸುರ್ಗುಜಾದ ಅಂಬಿಕಾಪುರದಲ್ಲಿ 40 ಜನರು ಜಾಂಡೀಸ್​ಗೆ ತುತ್ತಾಗಿದ್ದಾರೆ. ಆರೋಗ್ಯ ಇಲಾಖೆಯು ನಗರದ ಪೀಡಿತ ಪ್ರದೇಶದಲ್ಲಿ ವೈದ್ಯಕೀಯ ಶಿಬಿರವನ್ನು ಸ್ಥಾಪಿಸಿದೆ.

ಸೋಂಕಿಗೆ ಕಲುಷಿತ ನೀರು ಕಾರಣ ಎಂದು ಹೇಳಲಾಗುತ್ತಿದ್ದು, ಈ ಕುರಿತು ಕಾರಣ ಹುಡುಕಿ ಪುರಸಭೆಯ ಎಂಜಿನಿಯರ್‌ಗಳು ನೀರು ಸರಬರಾಜು ಮಾರ್ಗಗಳನ್ನು ಪರಿಶೀಲಿಸಲು ಪ್ರಾರಂಭಿಸಿದ್ದು, ನೀರಿನ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ವರದಿಯಲ್ಲಿ 10 ನೀರಿನ ಮಾದರಿಗಳಲ್ಲಿ 4ರಲ್ಲಿ ಇ.ಕೋಲಿ ಬ್ಯಾಕ್ಟೀರಿಯಾದ ಪರೀಕ್ಷೆ ಸಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವೈದ್ಯರು ಸೇರಿದಂತೆ ಸುಮಾರು ಎಂಟು ಆರೋಗ್ಯ ಕಾರ್ಯಕರ್ತರ ತಂಡವು ವಾರ್ಡ್‌ನಲ್ಲಿ ನಿರಂತರ ತಪಾಸಣೆ ಮತ್ತು ಚಿಕಿತ್ಸೆ ನೀಡಲಾಗುತ್ತಿದೆ.

ನಗರಸಭೆಯ ವಿರೋಧ ಪಕ್ಷದ ನಾಯಕ ಶಫಿ ಅಹ್ಮದ್ ಮಾತನಾಡಿ, ಅಧಿಕಾರಿಗಳು ನೀರಿನ ಪೈಪ್‌ಲೈನ್‌ಗಳನ್ನು ಪರಿಶೀಲಿಸುತ್ತಿದ್ದಾರೆ. ಪುರಸಭೆ ಆಡಳಿತದ ನಿರ್ಲಕ್ಷ್ಯದ ಪರಿಣಾಮವೇ ಈ ಸೋಂಕು ಹರಡುವಿಕೆ ಕಂಡು ಬಂದಿದೆ ಎಂದು ಆರೋಪಿಸಿದ್ದಾರೆ.

ಆದರೆ ಈ ಆರೋಪವನ್ನು ತಳ್ಳಿ ಹಾಕಿರುವ ಪುರಸಭೆ ಅಧಿಕಾರಿಗಳು, ಸರಬರಾಜು ಮಾಡಲಾದ ನೀರು ಶುದ್ಧವಾಗಿದೆ. ನಿಯಮಿತವಾಗಿ ಪರೀಕ್ಷೆಗೆ ಒಳಗಾಗುತ್ತಿದೆ. ಜಾಂಡೀಸ್​ ಸೋಂಕು ಹರಡುವಿಕೆಗೆ ಬೇರೆ ಕಾರಣವಿರಬಹುದು. ಪೈಪ್‌ಲೈನ್‌ಗಳಲ್ಲಿನ ಸೋರಿಕೆಯಿಂದಾಗಿರಬಹುದು ಎಂದಿದ್ದಾರೆ.

ಪೈಪ್​ಗಳ ಸೋರಿಕೆಯನ್ನು ಪರಿಶೀಲಿಸಲು ತಂಡಗಳು ಪೈಪ್‌ಲೈನ್‌ಗಳನ್ನು ಅಗೆಯುತ್ತಿವೆ.ಈ ವೇಳೆ, ಪೈಪ್​ಲೈನ್​ ಸುತ್ತ ಮುರಿದ ಮತ್ತು ಸವೆದ ಚಪ್ಪಲಿಗಳನ್ನು ಕಟ್ಟಿಹಾಕಿರುವುದು ಕಂಡು ಬಂದಿದೆ. ಸಮಸ್ಯೆಯನ್ನು ತಕ್ಷಣವೇ ಪರಿಹರಿಸಲಾಗುವುದು ಎಂದು ಆಯುಕ್ತರು ನಿವಾಸಿಗಳಿಗೆ ಭರವಸೆ ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !