September 29, 2026
Tuesday, September 29, 2026
spot_img

ಅತಿಯಾದ ಉಪ್ಪು ಸೇವನೆ ಮಾಡಿದರೆ ಏನಾಗುತ್ತದೆ? ಯಾವ ಉಪ್ಪಿನ ಬಳಕೆ ಸೂಕ್ತ? ಇಲ್ಲಿದೆ ಮಾಹಿತಿ

ರಾಜ್ಯದಲ್ಲಿ ಉಪ್ಪು ಸೇವನೆ ಹಾಗೂ ಬಳಕೆಗೆ ಆರೋಗ್ಯ ಇಲಾಖೆ ಮಾರ್ಗಸೂಚಿ ಪ್ರಕಟಿಸಿದೆ. ಇದರ ಜೊತೆಗೆ ಶಾಲೆ, ರೆಸ್ಟೋರೆಂಟ್‌, ಹೊಟೇಲ್‌ ಹಾಗೂ ಪ್ಯಾಕೇಜ್‌ ಆಹಾರ ತಯಾರಕರಿಗೂ ಗೈಡ್‌ಲೈನ್ಸ್‌ ರಿಲೀಸ್‌ ಮಾಡಲಾಗಿದೆ. ಅತಿಯಾದ ಉಪ್ಪಿನ ಸೇವನೆಯಿಂದಾಗಿ ರಕ್ತದೊತ್ತಡ, ಹೃದಯಾಘಾತ ಹಾಗೂ ಇನ್ನಿತರ ಸಮಸ್ಯೆಗಳು ಬಾಧಿಸುತ್ತವೆ. ರಾಜ್ಯದ ಜನರ ಆರೋಗ್ಯ ಸುರಕ್ಷತೆಯನ್ನು ಗಮನದಲ್ಲಿ ಇಟ್ಟುಕೊಂಡು ಆಹಾರ ಇಲಾಖೆ ಮಿತವಾಗಿ ಉಪ್ಪನ್ನು ಬಳಸುವಂತೆ ಸೂಚನೆ ನೀಡಿದೆ. ಉಪ್ಪಿಲ್ಲದೇ ಯಾವ ಅಡುಗೆಯೂ ರುಚಿಸೋದಿಲ್ಲ. ಆದರೆ ಉಪ್ಪು ಅತಿಯಾದರೆ ಆರೋಗ್ಯಕ್ಕೆ ಕಂಟಕ ತಪ್ಪಿದ್ದಲ್ಲ.

ಒಂದು ದಿನಕ್ಕೆ ಒಬ್ಬ ಮನುಷ್ಯನಿಗೆ ಒಂದು ಸ್ಪೂನ್‌ನಷ್ಟು, ಅಂದರೆ ಐದು ಗ್ರಾಮ್‌ನಷ್ಟು ಉಪ್ಪು ಮಾತ್ರ ಬೇಕಾಗುತ್ತದೆ. ಮನೆಯಲ್ಲಿ ಮಾಡುವ ಅಡುಗೆಯಿಂದ ದೇಹಕ್ಕೆ ಸಾಕಷ್ಟು ಉಪ್ಪು ಸಿಗುತ್ತದೆ. ಹೊರಗಿನಿಂದ ತಂದ ಆಹಾರದಲ್ಲಿ ಸೋಡಿಯಂ ಅಂಶ ಅತಿಯಾಗಿರುತ್ತದೆ. ಹೀಗಾಗಿ ಹೊರಗಿನ ಆಹಾರದ ಮೇಲೆ ಡಿಪೆಂಡ್‌ ಆಗದೇ ಇರುವುದು ಉತ್ತಮ.

ಯಾವ ಉಪ್ಪು ಬಳಸಬೇಕು?

ಉಪ್ಪಿನ ಹಿಂಭಾಗದಲ್ಲಿ ಇಂಗ್ರೀಡಿಯಂಟ್ಸ್‌ ಲಿಸ್ಟ್‌ ಇರುತ್ತದೆ. ಅದರಲ್ಲಿ ಪೊಟ್ಯಾಶಿಯಂ ಕ್ಲೋರೈಡ್‌ ಎಂದು ಬರೆದಿರುವ ಉಪ್ಪನ್ನು ಖರೀದಿ ಮಾಡಬಹುದು. ಸೋಡಿಯಂ ಕ್ಲೋರೈಡ್‌ ಎಂದಿರುವ ಉಪ್ಪಿನ ಬಳಕೆ ಕಡಿಮೆ ಮಾಡಿ.

ಏನೆಲ್ಲಾ ತೊಂದರೆಗಳು?

ದೇಹದಲ್ಲಿ ಉಪ್ಪಿನ ಪ್ರಮಾಣ ಹೆಚ್ಚಾದರೆ ಅದು ರಕ್ತದೊತ್ತಡದ ಮೇಲೆ ಮಾರಕ ಪರಿಣಾಮ ಬೀರುತ್ತದೆ. ಹೆಚ್ಚು ಉಪ್ಪು ತಿನ್ನುವುದು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಹುದು. ಇದು ಹೃದ್ರೋಗದ ಅಪಾಯ ಹೆಚ್ಚಿಸುತ್ತದೆ.

ಅತಿಯಾದ ಉಪ್ಪು ಸೇವನೆಯು ಆಗಾಗ್ಗೆ ಮೂತ್ರ ವಿಸರ್ಜನೆಯ ಸಮಸ್ಯೆಗೆ ಕಾರಣವಾಗಬಹುದು. ಜೊತೆಗೆ ಮೂತ್ರದ ಬಣ್ಣವು ಗಾಢವಾಗಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಮೂತ್ರದ ಪ್ರಮಾಣವೂ ಕಡಿಮೆಯಾಗುತ್ತದೆ.

ಅತಿಯಾದ ಉಪ್ಪು ಸೇವನೆಯು ದೇಹದಲ್ಲಿ ದೌರ್ಬಲ್ಯ ಮತ್ತು ಆಯಾಸಕ್ಕೆ ಕಾರಣವಾಗಬಹುದು

ಉಪ್ಪಿನ ಅತಿಯಾದ ಸೇವನೆಯು ದೇಹದಲ್ಲಿ ನೀರು ಸಂಗ್ರಹವಾಗಲು ಕಾರಣವಾಗುತ್ತದೆ. ಇದರ ಪರಿಣಾಮವಾಗಿ, ಕೈಗಳು, ಕಾಲುಗಳು, ಮುಖ, ಪಾದಗಳು ಊದಿಕೊಳ್ಳಬಹುದು

Must Read