April 22, 2026
Wednesday, April 22, 2026
spot_img

ಹುಬ್ಬಳ್ಳಿಯ ಕೆಎಸ್‌ಸಿಎ ಕ್ರಿಕೆಟ್ ಮೈದಾನದ ಪೆವಿಲಿಯನ್​ಗೆ ಸುನೀಲ್‌ ಜೋಶಿ ಹೆಸರು ನಾಮಕರಣ!

ಹೊಸ ದಿಗಂತ ವರದಿ, ಹುಬ್ಬಳ್ಖಿ:

ಇಲ್ಲಿನ ರಾಜನಗದ ಕೆಎಸ್ ಸಿಎ ಮೈದಾನದ ಪೆವಿಲಿಯನ್ ಒಂದು ಬ್ಲಾಕ್ ಗೆ ಹಿರಿಯ ಕ್ರಿಕೆಟಿಗ ಸುನೀಲ್ ಜೋಶಿ ಅವರ ಹೆಸರು ನಾಮಕರಣ ಮಾಡಲಾಯಿತು. ಈ ಕ್ಷಣ ಕಂಡ‌ ಸುನೀಲ ಜೋಶಿ ಭಾವುಕರಾದರು. ಬಿಸಿಸಿಐ ಅಧ್ಯಕ್ಷ ಮಿಥುನ್ ಮನ್ಹಾಸ್ ಅವರು ಉದ್ಘಾಟಿಸಿದರು.

ನಂತರ ಮಾತನಾಡು ಅವಕಾಶ ನೀಡಿದಾಗ ಖುಷಿಯಿಂದ ಮಾತು ಬಾರದೆ ಮುಖ ವಿಸ್ಮಿತರಾದರು. ಬಾಲ್ಯದಲ್ಲಿ ಗದಗ ಹಾಗೂ ಹುಬ್ಬಳ್ಳಿಯಲ್ಲಿ ಕಳೆದ ದಿನಗಳ ಸ್ಮರಿಸಿದರು.

ನನಗೆ ಇಷ್ಟು ದೊಡ್ಡ ಕೀರ್ತಿ ಸಿಗುತ್ತೆ ಎಂದುಕೊಂಡಿರಲಿಲ್ಲ. ಅದು ಇಂದಿನ ದಿನವಾಗಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ರಾಷ್ಟ್ರ ಕವಿ ಕುವೆಂಪು ಅವರು ಹೇಳಿದಂತೆ ನಿನ್ನ ಇಂದಿನ ದಿನ ಯಾರಿಗಾದರೂ ಪ್ರೇರಣೆ ಆಗುತ್ತದೆ. ಆ ದಿನ ನನಗೆ ಈ ದಿನವಾಗಿದೆ. ನನ್ನ ಜೀವಮಾನದಲ್ಲಿ ಭಾರತದ ಪರ ಆಡುತ್ತೇನೆ ಅಂದುಕೊಂಡಿರಲಿಲ್ಲ ಎಂದು ತಿಳಿಸಿದರು.

ನನ್ನ ಕೋಚ ಆದ ದಯಾನಂದ ಶೆಟ್ಟಿ ಹಾಗೂ ಎ.ಕೆ.ಕ್ರಿಕೆಟ್ ಅಕಾಡೆಮಿಗೆ ಧನ್ಯವಾದ ಸಲ್ಲಿಸುತ್ತೇನೆ. ಜನ್ಮ ನೀಡಿದ ಸ್ಥಳ ಗದಗ ಆದರೂ ಕ್ರಿಕೆಟ್ ಭವಿಷ್ಯ ಕಟ್ಟಿಕೊಟ್ಟಿದ್ದು ಹುಬ್ಬಳ್ಳಿ. ನನ್ನ ಪರಿಶ್ರಮ ಈ ಮಟ್ಟಕ್ಕೆ ಬೆಳೆಯಲು ಕಾರಣವಾಗಿದ್ದು ಅದನ್ನು ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದರು.

ಕರ್ನಾಟಕ ಹಾಗೂ ಭಾರತ ತಂಡದಲ್ಲಿ ಆಡಿರುವುದು ಹೆಮ್ಮೆಯ ಸಂಗತಿ. ನನ್ನ ಪಾಲಕರು ಹಾಗೂ ಸಹೋದರರಾದ ಅಶೋಕ ಮತ್ತು ಸೆಲೆಕ್ಷನ ಕಮೀಟಿ ಹಾಗೂ ಪತ್ನಿಗೆ ಪ್ರೋತ್ಸಾಹ ಹಾಗೂ ಸಹಕಾರ ನೀಡಿದ್ದಾರೆ ಎಂದು ಹೇಳಿದರು.

ನನ್ನ ಮಗ ಆರ್ಯನ್ ಜೊತೆ ಹೆಚ್ಚು ದಿನ ಇರಲು ಹಾಗೂ ಅವನಿಗೆ ಸಮಯ ನೀಡಲು ಸಾಧ್ಯವಾಗಲಿಲ್ಲ ಎಂದು ಎಲ್ಲರಿಗೂ ಧನ್ಯವಾದ ತಿಳಿಸಿದರು.

ಈ ಸಂದರ್ಭದಲ್ಲಿ ಕೆಎಸ್ ಸಿಎ ಅಧ್ಯಕ್ಷ ವೆಂಕಟೇಶ ಪ್ರಸಾದ, ಕಾರ್ಯದರ್ಶಿ ಸಂತೋಷ ಮೆನನ, ಜಂಟಿ ಕಾರ್ಯದರ್ಶಿ ಬಿ.ಕೆ.ರವಿ., ಖಜಾಂಚಿ ಮಧುಕರ, ಉಪಾಧ್ಯಕ್ಷ ಸುಜೀತ ಸೋಮಸುಂದರ, ವೀರಣ್ಣ ಸವಡಿ, ಡಾ.ರವನೀತ ಜೋಶಿ ಸೇರಿದಂತೆ ಮೊದಲಾದವರಿದ್ದರು.‌

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !